HomeEntertainmentʼನಾಟು ನಾಟುʼಗೆ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಸ್ಟೆಪ್;‌‌ ಸುಂದರ ವಿಡಿಯೋ ವೈರಲ್

ʼನಾಟು ನಾಟುʼಗೆ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಸ್ಟೆಪ್;‌‌ ಸುಂದರ ವಿಡಿಯೋ ವೈರಲ್

ʼನಾಟು ನಾಟುʼ ಜಗತ್ತಿನಲ್ಲಿ ತಂದ ಅಲೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಅಲ್ಲದೆ, RRR ನ ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ ಇತಿಹಾಸವನ್ನು ಬರೆದಿದೆ. ಜನರು ಈ ಹಾಡಿಗೆ ಡಾನ್ಸ್​ ಮಾಡಲು ಆರಂಭಿಸಿದ್ದು, ಈ ಹಾಡಿನ ಹಲವಾರು ವೀಡಿಯೊಗಳು ಇಂಟರ್ನೆಟ್‌ನಲ್ಲಿ ಸುತ್ತುತ್ತಿವೆ.

ದಕ್ಷಿಣ ಕೊರಿಯಾದ ರಾಯಭಾರಿ ಕಚೇರಿಯ ನಂತರ, ಜರ್ಮನ್ ರಾಯಭಾರಿ ಕಚೇರಿಯ ರಾಯಭಾರಿ ಮತ್ತು ಸಿಬ್ಬಂದಿ ಈ ಹಾಡಿಗೆ ಡಾನ್ಸ್​ ಮಾಡಿದ್ದು, ಅದೀಗ ವೈರಲ್ ಆಗಿದೆ. ಇದನ್ನು ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಚಿತ್ರೀಕರಿಸಿರುವುದು ವಿಶೇಷ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೀಗ ವೈರಲ್ ಆಗಿರುವ ವೀಡಿಯೋವನ್ನು ಡಾ. ಫಿಲಿಪ್ ಅಕರ್‌ಮನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

2 ನಿಮಿಷಗಳ ಕ್ಲಿಪ್‌ನಲ್ಲಿ, ಅಕರ್‌ಮನ್ ನೀಲಿ ಕುರ್ತಾವನ್ನು ಧರಿಸಿ ಚಾಂದಿನಿ ಚೌಕ್‌ನ ಲೇನ್‌ಗಳಲ್ಲಿ ಅಡ್ಡಾಡುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಒಬ್ಬ ವ್ಯಕ್ತಿ ನಾಟು ನಾಟು ಹಾಡಿನ ಮೂಡ್​ ತರಿಸುತ್ತಾನೆ.

ನಂತರ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಚಾಂದಿನಿ ಚೌಕ್‌ನ ವಿವಿಧ ಮೂಲೆಗಳಿಂದ ಬೀದಿಗಿಳಿಯಲು ಬಂದು ನೃತ್ಯ ಮಾಡುವುದನ್ನು ನೋಡಬಹುದು.

For Latest News Updates, Join Our Whatsapp Community🚩
RELATED ARTICLES

Most Popular