HomeKarnatakaBIG NEWS: ರಾಜ್ಯದಲ್ಲಿ ಇದುವರೆಗೂ ಜಿಬಿಎಸ್ ಮರಣ ದೃಢಪಟ್ಟಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

BIG NEWS: ರಾಜ್ಯದಲ್ಲಿ ಇದುವರೆಗೂ ಜಿಬಿಎಸ್ ಮರಣ ದೃಢಪಟ್ಟಿಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ ಯಾವುದೇ ಗೀಲನ್ ಬಾ ಸಿಂಡ್ರೋಮ್(ಜಿಬಿಎಸ್) ಮರಣ ಪ್ರಕರಣ ದೃಢಪಟ್ಟಿಲ್ಲವೆಂದು ಆರೋಗ್ಯ ಇಲಾಖೆ ಹೇಳಿದೆ.

ಚಿಕ್ಕೋಡಿಯ ಡೆಣಿವಾಡಿ ಗ್ರಾಮದ 64 ವರ್ಷದ ವ್ಯಕ್ತಿ ಮತ್ತು ಸಂಕೇಶ್ವರ ಪಟ್ಟಣದ 14 ವರ್ಷದ ಬಾಲಕನ ಮರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಈ ಎರಡೂ ಪ್ರಕರಣಗಳಲ್ಲಿ ವೈದ್ಯರು ಸಂಶಯಾಸ್ಪದ ಜಿಬಿಎಸ್ ಕಾಯಿಲೆ ಎಂದು ಪರಿಗಣಿಸಿ ಚಿಕಿತ್ಸೆ ನೀಡಿದ್ದಾರೆ. ಆದರೆ ಇದೇ ಕಾಯಿಲೆ ಎಂದು ಖಚಿತವಾಗಿಲ್ಲ. ಮೃತಪಟ್ಟ ಇಬ್ಬರೂ ವಾಸಿಸುತ್ತಿದ್ದ ಪಟ್ಟಣ ಮತ್ತು ಗ್ರಾಮಕ್ಕೆ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಇಂಟಿಗ್ರೇಟೆಡ್ ದಿಸೀಸ್ ಸರ್ವೆಲೆನ್ಸ್ ಪ್ರಾಜೆಕ್ಟ್ ನಿರ್ದೇಶಕರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular