HomeLatest NewsBIG NEWS: ಜಿಬಿಎ ಎಡವಟ್ಟು: ಗಣರಾಜ್ಯೋತ್ಸವ ಸ್ವಾಗತ ಫಲಕದಲ್ಲಿ ಬಿಬಿಎಂಪಿ ಹೆಸರು

BIG NEWS: ಜಿಬಿಎ ಎಡವಟ್ಟು: ಗಣರಾಜ್ಯೋತ್ಸವ ಸ್ವಾಗತ ಫಲಕದಲ್ಲಿ ಬಿಬಿಎಂಪಿ ಹೆಸರು

ಬೆಂಗಳೂರು: 77ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ಎಡವಟ್ಟು ಮಾಡಿಕೊಂಡಿದೆ. ಗಣರಾಜ್ಯೋತ್ಸವದಲ್ಲಿ ಅಳವಡಿಸಲಾಗಿದ್ದ ಸ್ವಾಗತ ಫಲಕಗಳಲ್ಲಿ ಬಿಬಿಎಂಪಿ ಎಂದೇ ಹೆಸರನ್ನು ಅಲವಡಿಸಲಾಗಿದೆ.

ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಸ್ವಾಗತ ಫಲಕಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಜಿಬಿಎ ಬದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ಹೆಸರೇ ಇನ್ನೂ ಅಳವಡಿಸಿದ್ದು, ಜಿಬಿಎ ಪ್ರಮಾದವೆಸಗಿದೆ.

ಬಿಬಿಎಂಪಿ ಬದಲಾಗಿ ಜಿಬಿಎ ರಚನೆಯಾಗಿ ಸಾಕಷ್ಟು ಸಮಯಗಳು ಕಳೆದಿದ್ದರೂ ರಾಅಜ್ಯಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ರೀತಿ ಎಡವಟ್ಟು ಅದಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಭಾಗವಹಿಸುವ ಕಾರ್ಯಕ್ರಮದಲ್ಲಿಯೇ ಜಿಬಿಎ ಇಂತಹ ಪ್ರಮಾದವೆಸಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular