HomeKarnatakaಜಿಬಿಎ 5 ನಗರ ಪಾಲಿಕೆಗಳು: ವಿಭಾಗ, ಉಪ ವಿಭಾಗ ರಚಿಸಿ ಆದೇಶ

ಜಿಬಿಎ 5 ನಗರ ಪಾಲಿಕೆಗಳು: ವಿಭಾಗ, ಉಪ ವಿಭಾಗ ರಚಿಸಿ ಆದೇಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಎಂದು ಬದಲಾವಣೆ ಮಾಡಲಾಗಿದೆ. ಈಗ 369 ವಾರ್ಡ್‌ಗಳನ್ನು ಬೆಂಗಳೂರು ನಗರ ಹೊಂದಿದ್ದು, 5 ನಗರ ಪಾಲಿಕೆಗಳನ್ನು ಮಾಡಲಾಗಿದೆ.

ಜಿಬಿಎ ಮುಖ್ಯ ಆಯುಕ್ತರ ಕಛೇರಿ  ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ರಚನೆಗೊಂಡಿರುವ 5 ನಗರ ಪಾಲಿಕೆಯಲ್ಲಿನ 369 ವಾರ್ಡ್‌ಗಳ ಪುನರ್ ವಿಂಗಡಣೆಯ ಆಧಾರದ ಮೇಲೆ ವಿಭಾಗ ಮತ್ತು ಉಪ ವಿಭಾಗಗಳನ್ನು ರಚಿಸಿ ಆದೇಶಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ, 2024 ಅನ್ನು ರಚಿಸಿ ದಿನಾಂಕ 15-05-2025 ರಿಂದ ಜಾರಿಗೆ ತರಲಾಗಿದೆ ಎಂದು ಹೇಳಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ನೂತನವಾಗಿ ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿವೆ ಎಂದು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿನ್ನಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪುದೇಶದ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ವಾರ್ಡ್‌ಗಳ ಪುನರ್ ವಿಂಗಡಣೆಗಾಗಿ ವಾರ್ಡ್‌ಗಳ ಪುನರ್ ವಿಂಗಡಣಾ ಅಯೋಗವನ್ನು ರಚಿಸಲಾಗಿರುತ್ತದೆ.

ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳಿಗೆ ಸಂಬಂಧಿಸಿದ ವಾರ್ಡ್‌ವಾರು ಕ್ಷೇತ್ರ ಪುನರ್ ವಿಂಗಡನೆಯನ್ನು ಅಧಿಸೂಚಿಸಲಾಗಿದ್ದು, ನಗರ ಪಾಲಿಕೆಗಳಿಗೆ ಒಳಪಡುವ ವಾರ್ಡ್‌ಗಳು ಕೆಳಕಂಡಂತಿದೆ

  • ಕೇಂದ ನಗರ ಪಾಲಿಕೆ ವಾರ್ಡ್‌ 63
  • ಪೂರ್ವ ನಗರ ಪಾಲಿಕೆ ವಾರ್ಡ್ 50
  • ಪಶ್ಚಿಮ ನಗರ ಪಾಲಿಕೆ ವಾರ್ಡ್ 112
  • ಉತ್ತರ ನಗರ ಪಾಲಿಕೆ ವಾರ್ಡ್ 72
  • ದಕ್ಷಿಣ ನಗರ ಪಾಲಿಕೆ ವಾರ್ಡ್  72
  • ಒಟ್ಟು ವಾರ್ಡ್‌ಗಳು 369

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರದೇಶದ ವ್ಯಾಪ್ತಿಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 369 ವಾರ್ಡ್‌ಗಳನ್ನು ರಚಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರದೇಶದ ವ್ಯಾಪ್ತಿಯಲ್ಲಿನ ಪಾಲಿಕೆಗಳ ಆಡಳಿತಾತ್ಮಕ ಕೆಲಸಕಾರ್ಯಗಳ ಹಿತದೃಷ್ಟಿಯಿಂದ ಈ ತಕ್ಷಣದಿಂದ ಜಾರಿಗೆ ಬರುವಂತೆ, ಕಂದಾಯ, ಕಾಮಗಾರಿ ಮತ್ತು ಆರೋಗ್ಯ ಇಲಾಖೆಗಳಿಗೆ ಸಂಬಂಧಿಸಿದಂತೆ 50 ವಿಭಾಗ ಹಾಗೂ 150 ಉಪ-ವಿಭಾಗಗಳನ್ನು ರಚಿಸಿ ಆದೇಶಿಸಲಾಗಿದೆ.

  • ಕೇಂದ್ರ ನಗರ ಪಾಲಿಕೆ 63 ವಾರ್ಡ್, ವಿಭಾಗ 7, ಉಪ ವಿಭಾಗ 24
  • ಪೂರ್ವ ನಗರ ಪಾಲಿಕೆ 50 ವಾರ್ಡ್, ವಿಭಾಗ7, ಉಪ ವಿಭಾಗ 22
  • ಪಶ್ಚಿಮ ನಗರ ಪಾಲಿಕೆ 112 ವಾರ್ಡ್, ವಿಭಾಗ 15, ಉಪ ವಿಭಾಗ 45
  • ಉತ್ತರ ನಗರ ಪಾಲಿಕೆ 72 ವಾರ್ಡ್, ವಿಭಾಗ 11, ಉಪ ವಿಭಾಗ 30
  • ದಕ್ಷಿಣ ನಗರ ಪಾಲಿಕೆ 72 ವಾರ್ಡ್, ವಿಭಾಗ 10, ಉಪ ವಿಭಾಗ 150

ಮೇಲ್ಕಂಡಂತೆ ರಚಿಸಲಾಗಿರುವ ವಿಭಾಗ, ಉಪ-ವಿಭಾಗ ಹಾಗೂ ವಾರ್ಡ್‌ಗಳ ಅನ್ವಯ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದೆ.

ಈ ಹಿಂದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ/ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ/ ನಗರ ಪಾಲಿಕೆಗಳಲ್ಲಿ ವಿಭಾಗ ಹಾಗೂ ಉಪ-ವಿಭಾಗಗಳ ರಚನೆ ಸಂಬಂಧ ಹೊರಡಿಸಿರುವ ಎಲ್ಲಾ ಆದೇಶಗಳು ರದ್ದಾಗುತ್ತದೆ ಎಂದು ಆದೇಶ ಹೇಳಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular