ಥಿಯೇಟರ್ಗಳಲ್ಲಿ ಧೂಳೆಬ್ಬಿಸಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ‘ಬಾರ್ಡರ್ 2’ ಸಿನಿಮಾ ಈಗ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಓಟಿಟಿ ಪ್ಲಾಟ್ಫಾರ್ಮ್: ‘ಬಾರ್ಡರ್ 2’ ಸಿನಿಮಾದ ಡಿಜಿಟಲ್ ಹಕ್ಕನ್ನು ಖ್ಯಾತ ಓಟಿಟಿ ಸಂಸ್ಥೆ ನೆಟ್ಫ್ಲಿಕ್ಸ್ (Netflix) ತನ್ನದಾಗಿಸಿಕೊಂಡಿದೆ.
ಮಾರ್ಚ್ 20, 2026 ರಿಂದ ಈ ಚಿತ್ರವು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿರುತ್ತದೆ. 1971ರ ಭಾರತ-ಪಾಕಿಸ್ತಾನ ಯುದ್ಧದ ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ ಒಗ್ಗೂಡಿ ಶತ್ರುಗಳನ್ನು ಸದೆಬಡಿದ ರೋಚಕ ಕಥೆಯಿದೆ.
ಸನ್ನಿ ಡಿಯೋಲ್ ಲೆಫ್ಟಿನೆಂಟ್ ಕರ್ನಲ್ ಫತೇಹ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡರೆ, ವರುಣ್ ಧವನ್ (ಮೇಜರ್ ಹೋಶಿಯಾರ್ ಸಿಂಗ್), ದಿಲ್ಜಿತ್ ದೋಸಾಂಜ್ (ವೀರ ನಿರ್ಮಲ್ ಜಿತ್ ಸಿಂಗ್ ಸೆಖೋನ್) ಮತ್ತು ಅಹಾನ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಬಾಕ್ಸ್ ಆಫೀಸ್ ಕಲೆಕ್ಷನ್: ಈ ಸಿನಿಮಾ ಭಾರತದಲ್ಲಿ ಸುಮಾರು 392.40 ಕೋಟಿ ರೂ. ಗಳಿಸಿದ್ದು, ವಿಶ್ವದಾದ್ಯಂತ ಒಟ್ಟು 449.65 ಕೋಟಿ ರೂ. ದಾಟುವ ಮೂಲಕ ದಾಖಲೆ ನಿರ್ಮಿಸಿದೆ. ಸಿನಿಮಾ ಮಂದಿರಗಳಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು ಮಾರ್ಚ್ 20 ರಿಂದ ಮನೆಯಲ್ಲೇ ಕುಳಿತು ನೆಟ್ಫ್ಲಿಕ್ಸ್ನಲ್ಲಿ ವೀಕ್ಷಿಸಬಹುದು.

