ವಿಶ್ವದ ಟಾಪ್ ಶ್ರೀಮಂತರ ಪಟ್ಟಿಗೆ ಮತ್ತೆ ಎಂಟ್ರಿ ಕೊಟ್ಟ ಗೌತಮ್ ಅದಾನಿ

ನವದೆಹಲಿ: ಅದಾನಿ ಗ್ರೂಪ್‌ ಅಧ್ಯಕ್ಷ ಗೌತಮ್ ಅದಾನಿ ಅವರು ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಗೆ ಮರುಪ್ರವೇಶಿಸಿದ್ದು, 17 ನೇ ಸ್ಥಾನದಲ್ಲಿದ್ದಾರೆ.

ಫೆಬ್ರವರಿ 7 ರಂದು ಅದಾನಿ ಸಮೂಹದ ಷೇರುಗಳು ಏರಿದ ನಂತರ ಗೌತಮ್ ಅದಾನಿ $463 ಮಿಲಿಯನ್ ಹೆಚ್ಚಳದೊಂದಿಗೆ ವಿಶ್ವದ ಅಗ್ರ ಗೇನರ್‌ ಗಳಲ್ಲಿ ಒಬ್ಬರಾಗಿದ್ದಾರೆ.

ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿದ್ದ ಗೌತಮ್ ಅದಾನಿ ಕಳೆದ ವಾರ ಯಿಂದ ಟಾಪ್ 20 ರೊಳಗೆ ಸ್ಥಾನ ಪಡೆಯಲಿಲ್ಲ.

ಅದಾನಿ ಎಂಟರ್‌ಪ್ರೈಸಸ್ ಷೇರು ಶೇ.25ರಷ್ಟು ಏರಿಕೆಯಾಗಿ 1,965.50 ರೂ. ಗರಿಷ್ಠ ಮಟ್ಟ ತಲುಪಿದೆ. ಅದಾನಿ ಪೋರ್ಟ್ಸ್ ಬೆಲೆಯು 9.64% ರಷ್ಟು ಏರಿಕೆಯಾಗಿ 598.70 ರೂ.ಗೆ ತಲುಪಿದೆ. ಅದಾನಿ ಟ್ರಾನ್ಸ್‌ ಮಿಷನ್ ಮತ್ತು ಅದಾನಿ ವಿಲ್ಮಾರ್ ಇಬ್ಬರೂ ತಮ್ಮ ಅಪ್ಪರ್ ಸರ್ಕ್ಯೂಟ್ ಮಿತಿಯನ್ನು ಕ್ರಮವಾಗಿ 1,324.45 ರೂ.ಮತ್ತು 399.40 ರೂ. ತಲುಪಿದೆ.

ಹಿಂಡೆನ್‌ ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ಮೇಲೆ ಲೆಕ್ಕಪತ್ರ ವಂಚನೆ ಆರೋಪ ಮಾಡಿದ ನಂತರ ಅದಾನಿ ಅವರ ಸಂಪತ್ತಿನ ಭಾರಿ ಕುಸಿತಕ್ಕೆ ಕಾರಣವಾಯಿತು.

ಕಳೆದ ಕೆಲವು ವಾರಗಳಲ್ಲಿ, ಅದಾನಿ ಗ್ರೂಪ್ ಸ್ಟಾಕ್‌ ಗಳು 118 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯ ಅಳಿಸಿ ಹಾಕಿವೆ. ಆದರೆ, ಅದಾನಿ ಗ್ರೂಪ್ ಬೆಂಬಲಿತ ಅದಾನಿ ಟ್ರಾನ್ಸ್‌ ಮಿಷನ್ ಸೋಮವಾರ ಡಿಸೆಂಬರ್ 2022 ತ್ರೈಮಾಸಿಕದಲ್ಲಿ 474.72 ಕೋಟಿ ರೂ.ಗಳ ಏಕೀಕೃತ ನಿವ್ವಳ ಲಾಭದಲ್ಲಿ 77.8 ಶೇಕಡ ಏರಿಕೆಯನ್ನು ವರದಿ ಮಾಡಿದೆ.

ಫೋರ್ಬ್ಸ್ ಪ್ರಕಾರ ಎಲೋನ್ ಮಸ್ಕ್($3 ಶತಕೋಟಿ), ತದಾಶಿ ಯಾನೈ($708 ಮಿಲಿಯನ್), ರವಿ ಜೈಪುರಿಯಾ ($675 ಮಿಲಿಯನ್) ಮತ್ತು ಲೋ ಟಕ್ ಕ್ವಾಂಗ್ ($648 ಮಿಲಿಯನ್) ಪಟ್ಟಿಯಲ್ಲಿ ಲಾಭ ಗಳಿಸಿದವರಾಗಿದ್ದು, ಅದಾನಿ ಈಗ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ 17 ನೇ ಸ್ಥಾನದಲ್ಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read