ಬೆಂಗಳೂರು: ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಚೊಕ್ಕಸಂದ್ರದ ಮನೆಯೊಂದರಲ್ಲಿ ನಡೆದಿದೆ.
ಮುಂಜಾನೆ ಎಂದಿನಂತೆ ಟೀ ಮಾಡಲೆಂದು ಸ್ಟವ್ ಹಚ್ಚುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಇಡೀ ಮನೆ ವ್ಯಾಪಿಸಿದೆ. ಮನೆಯಲ್ಲಿದ್ದ ಐವರು ಕಾರ್ಮಿಕರು ಸುಟ್ಟು ಗಾಯಗೊಂಡಿದ್ದಾರೆ. ಅಂಶುರಾಜ್ ಕುಮಾರ್, ಹುಸೇನ್ ಖಾನ್, ಅರಬೇಗ್ ಆಲಂ, ಮುಜಾಫರ್ ಹುಸೇನ್ ಹಾಗೂ ರೋಹಿತ್ ಚೌಧರಿ ಗಾಯಾಳುಗಳು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಹಾರ ಮೂಲದ ಕಾರ್ಮಿಕರಾದ ಇವರು ಒಂದೇ ರೂಂ ನಲ್ಲಿ ವಾಸವಾಗಿದ್ದರು. ಗ್ಯಾಸ್ ಲೀಕ್ ಆಗಿದ್ದು ಗಮನಿಸದೇ ಟೀ ಮಾಡಲು ಸ್ಟವ್ ಹಚ್ಚುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

