HomeKarnatakaBREAKING NEWS: ಬೆಟಗೇರಿ ಬಡ್ಡಿ ಬಕಾಸುರನ ಮನೆಯಲ್ಲಿ ಬರೋಬ್ಬರಿ 4.90 ಕೋಟಿ ಹಣ ಪತ್ತೆ; ಐವರು...

BREAKING NEWS: ಬೆಟಗೇರಿ ಬಡ್ಡಿ ಬಕಾಸುರನ ಮನೆಯಲ್ಲಿ ಬರೋಬ್ಬರಿ 4.90 ಕೋಟಿ ಹಣ ಪತ್ತೆ; ಐವರು ವಶಕ್ಕೆ

ಗದಗ: ಗದಗ-ಬೆಟಗೇರಿ ಬಡ್ಡಿ ದಂದೆಕೋರರ ಮನೆ ಮೇಲೆ ಪೊಲೀಸ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಬಡ್ಡಿ ದಂಧೆಕೋರನ ಮನೆಯಲ್ಲಿ ಬರೋಬ್ಬರಿ 4.90 ಕೋಟಿ ಹಣ ಪತ್ತೆಯಾಗಿದೆ.

ಯಲ್ಲಪ್ಪ ಮಿಸ್ಕಿನ್ ಎಂಬಾತನ ಮನೆಯಲ್ಲಿ ಕೋಟ್ಯಂತರ ರೂಪಾಯಿ ನಗದು ಹಣ, ಚಿನ್ನ ಪತ್ತೆಯಾಗಿದೆ. ಈ ಬಗ್ಗೆ ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದ್ದಾರೆ.

ಎರಡು ದಿನಗಳಿಂದ ಗದಗ-ಬೆಟಗೇರಿಯ 13 ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು. ಈ ವೇಳೆ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ 4.90 ಕೋಟಿ ಹಣ, 992 ಗ್ರಾಂ ಚಿನ್ನ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. 650 ಬಾಂಡ್, 4 ಬ್ಯಾಂಕ್ ಎಟಿಎಂ, 9 ಪಾಸ್ ಬುಕ್, ಎರಡು ಎಲ್ ಐಸಿ ಬಾಂಡ್ ಗಳನ್ನು ಜಪ್ತಿ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಲದೇ ಅಕ್ರಮವಾಗಿ ಸಂಗ್ರಹಿಸಿದ್ದ 65 ಲೀಟರ್ ಮದ್ಯ ವಶಕ್ಕೆ ಪಡೆಯಲಾಗಿದೆ. ಯಲ್ಲಪ್ಪ ಮಿಸ್ಕಿನ್ ಸೇರಿ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular