HomeKarnatakaಮಳೆಯಾಗಿಲ್ಲವೆಂದು ಶವ ಹೊರ ತೆಗೆದು ಸುಡಲು ಯತ್ನ: ಎರಡು ಸಮುದಾಯದವರ ಗಲಾಟೆ

ಮಳೆಯಾಗಿಲ್ಲವೆಂದು ಶವ ಹೊರ ತೆಗೆದು ಸುಡಲು ಯತ್ನ: ಎರಡು ಸಮುದಾಯದವರ ಗಲಾಟೆ

ದಾವಣಗೆರೆ: ಶವ ಸಂಸ್ಕಾರ ವಿಚಾರವಾಗಿ ದಾವಣಗೆರೆ ತಾಲೂಕು ನಲ್ಕುಂದ ಗ್ರಾಮದಲ್ಲಿ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದ್ದು, ಮಾಯಕೊಂಡ ಠಾಣೆ ಪೊಲೀಸರು ಹಲವರನ್ನು ಬಂಧಿಸಿದ್ದಾರೆ.

ನಲ್ಕುಂದ ಗ್ರಾಮದಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರು ವಯೋಸಹಜವಾಗಿ ಮೃತಪಟ್ಟಿದ್ದು, ಅವರಿಗೆ ಸೇರಿದ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ನಲ್ಕುಂದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಮಳೆಯಾಗಿದ್ದರೂ, ನಲ್ಕುಂದ ಗ್ರಾಮದಲ್ಲಿ ಮಾತ್ರ ಮಳೆಯಾಗಿರಲಿಲ್ಲ. ಇದಕ್ಕೆ  ಮಹಿಳೆಯ ಶವಸಂಸ್ಕಾರ ಕಾರಣವೆಂದು ಕೆಲವರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತಪಟ್ಟ ಮಹಿಳೆಗೆ ತೊನ್ನು ಇದ್ದ ಕಾರಣ ಅವರ ದೇಹವನ್ನು ಸುಡುವ ಬದಲು ಹೂಳಲಾಗಿದೆ. ಇದರಿಂದಾಗಿ ಮಳೆಯಾಗುತ್ತಿಲ್ಲ. ಅವರ ಶವ ಹೊರ ತೆಗೆದು ಸುಡಬೇಕು ಎಂದು ತೀರ್ಮಾನಿಸಿದ ಕೆಲವರು ಮೃತ ದೇಹವನ್ನು ಹೊರ ತೆಗೆದು ಸುಡುವ ಸಂದರ್ಭದಲ್ಲಿ ಮತ್ತೊಂದು ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದು, ಗಲಾಟೆ ನಡೆದಿದೆ.

ಸ್ಥಳದಲ್ಲಿ ಇದ್ದ ಹಿರಿಯರು ಜಗಳ ಬಿಡಿಸಿ ಕಳುಹಿಸಿದ್ದಾರೆ. ಸಂಜೆ ಗ್ರಾಮದ ದೇವಾಲಯದ ಬಳಿ ಎರಡು ಸಮುದಾಯಗಳ ಜನರ ನಡುವೆ ಭಾರಿ ಗಲಾಟೆ, ಹೊಡೆದಾಟ ನಡೆದಿದ್ದು, ಎರಡು ಕಡೆಯವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡು ಸಮುದಾಯದವರು ಮಾಯಕೊಂಡ ಠಾಣೆಗೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular