HomeIndiaಆಲ್ ಇಂಡಿಯಾ ರೇಡಿಯೋ ಬದಲು ಇನ್ನು ಮುಂದೆ 'ಆಕಾಶವಾಣಿ' ಎಂದು ಉಲ್ಲೇಖ

ಆಲ್ ಇಂಡಿಯಾ ರೇಡಿಯೋ ಬದಲು ಇನ್ನು ಮುಂದೆ ‘ಆಕಾಶವಾಣಿ’ ಎಂದು ಉಲ್ಲೇಖ

ಪ್ರಸಾರ ಭಾರತಿ ತನ್ನ ರೇಡಿಯೋ ಸೇವೆಗಳಲ್ಲಿ ಈವರೆಗೆ ಆಲ್ ಇಂಡಿಯಾ ರೇಡಿಯೋ (ಎಐಆರ್) ಎಂದು ಉಲ್ಲೇಖ ಮಾಡುತ್ತಿತ್ತು. ಇದೀಗ ಇದನ್ನು ಬದಲಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಆಲ್ ಇಂಡಿಯಾ ರೇಡಿಯೋ ಬದಲು ಇನ್ನು ಮುಂದೆ ‘ಆಕಾಶವಾಣಿ’ ಎಂದು ಉಲ್ಲೇಖಿಸಲು ನಿರ್ಧರಿಸಲಾಗಿದ್ದು, ಈ ಶಾಸನಬದ್ಧ ನಿಬಂಧನೆ ತಕ್ಷಣದಿಂದಲೇ ಜಾರಿಯಾಗಲು ಆದೇಶಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತಂತೆ ಆಕಾಶವಾಣಿ ಮಹಾ ನಿರ್ದೇಶಕಿ ವಸುಧಾ ಗುಪ್ತಾ ಆಂತರಿಕ ಆದೇಶ ಹೊರಡಿಸಿದ್ದು, ಸರ್ಕಾರ ಈ ಕುರಿತಂತೆ ಇದನ್ನು ಮೊದಲೇ ನಿರ್ಧರಿಸಿತ್ತು ಎನ್ನಲಾಗಿದೆ. ಇದನ್ನು ಈಗ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular