HomeCrimeBREAKING NEWS: ಹಣದ ವಿಚಾರವಾಗಿ ಗಲಾಟೆ: ಸ್ನೇಹಿತನನ್ನೇ ಹೊಡೆದು ಕೊಂದ ಗೆಳೆಯ

BREAKING NEWS: ಹಣದ ವಿಚಾರವಾಗಿ ಗಲಾಟೆ: ಸ್ನೇಹಿತನನ್ನೇ ಹೊಡೆದು ಕೊಂದ ಗೆಳೆಯ

ಬೆಂಗಳೂರು: ಹಣದ ವಿಚಾರವಾಗಿ ಗಲಾಟೆ ನಡೆದು ಸ್ನೇಹಿತನನ್ನೇ ಗೆಳೆಯ ದೊಣ್ಣೆಯಿಂದ ಹೊಡೆದು ಕೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ತಮಿಳುನಾಡಿನ ರಾಜೀವ್ ಗಾಂಧಿ (41) ಕೊಲೆಯಾದ ವ್ಯಕ್ತಿ. ಆರೋಪಿ ಸುರೇಶ್ ಬಾಲಾಜಿ ಕೊಲೆಗಾರರ. ಪೊಲೀಸರು ಆರೋಪಿ ಸುರೇಶ್ ನನ್ನು ಬಂಧಿಸಿದ್ದಾರೆ.

ಹಣದ ವಿಚರವಾಗಿ ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿತ್ತು. ಇದೇ ಗಲಾಟೆ ವೇಳೆ ಸುರೇಶ್ ಬಾಲಾಜಿ ರಾಜೀವ್ ನನ್ನು ದೊಣ್ಣೆಯಿಂದ ಹೊಡೆದಿದ್ದ. ಗಂಭೀರವಾಗಿ ಹಲ್ಲೆಗೊಳಗಾಗಿದ್ದ ರಾಜೀವ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ರಾಜೀವ್ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲೆ ಪ್ರಕರಣದಲ್ಲಿ ಸುರೇಶ್ ನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular