HomeLatest Newsಪತಿ-ಪತ್ನಿ ಫೋಟೋ ಪದೇ ಪದೇ ಸ್ಟೇಟಸ್ ಹಾಕ್ತೀರಾ? ನಿಮ್ಮ ಜಾತಕದ ಮೇಲೆ ಇದರ ಪ್ರಭಾವ ಹೇಗಿರುತ್ತೆ...

ಪತಿ-ಪತ್ನಿ ಫೋಟೋ ಪದೇ ಪದೇ ಸ್ಟೇಟಸ್ ಹಾಕ್ತೀರಾ? ನಿಮ್ಮ ಜಾತಕದ ಮೇಲೆ ಇದರ ಪ್ರಭಾವ ಹೇಗಿರುತ್ತೆ ಗೊತ್ತಾ?

ಇಂದಿನ ಡಿಜಿಟಲ್ ಯುಗದಲ್ಲಿ ಜೀವನದ ಪ್ರತಿ ಕ್ಷಣವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಅದರಲ್ಲೂ ದಂಪತಿಗಳು ತಮ್ಮ ನಡುವಿನ ಪ್ರೀತಿ, ಸಂಭಾಷಣೆ ಹಾಗೂ ಖಾಸಗಿ ಕ್ಷಣಗಳನ್ನು ಫೋಟೋಗಳ ಮೂಲಕ ಅಪ್‌ಲೋಡ್ ಮಾಡುವುದು ಇತ್ತೀಚೆಗೆ ಸಾಮಾನ್ಯ. ಆದರೆ, ಈ ರೀತಿ ಪದೇ ಪದೇ ಫೋಟೋಗಳನ್ನು ಹಂಚಿಕೊಳ್ಳುವ ಹಿಂದೆ ಬೇರೆಯದೇ ಆದ ಕಾರಣಗಳಿವೆಯೇ ಎಂಬ ಪ್ರಶ್ನೆ ಈಗ ಎದ್ದಿದೆ.

ಮನಶ್ಶಾಸ್ತ್ರಜ್ಞರು ಏನಂತಾರೆ?

ಮನಶ್ಶಾಸ್ತ್ರಜ್ಞರ ಪ್ರಕಾರ ಸಾರ್ವಜನಿಕವಾಗಿ ಸಂಗಾತಿಯನ್ನು ಅತಿಯಾಗಿ ಹೊಗಳುವುದು ಅಥವಾ ಪದೇ ಪದೇ ಸ್ಟೇಟಸ್ ಹಾಕುವವರಲ್ಲಿ ಕೆಲವೊಮ್ಮೆ ಇನ್ಸೆಕ್ಯೂರಿಟಿ (ಅಸುರಕ್ಷಿತ ಭಾವನೆ) ಹೆಚ್ಚಾಗಿರುತ್ತದೆ. ಮನೆಯಲ್ಲಿ ಪರಿಸ್ಥಿತಿ ಏನೇ ಇರಲಿ, ಹೊರಜಗತ್ತಿಗೆ ನಾವು ಚೆನ್ನಾಗಿದ್ದೇವೆ ಎಂದು ತೋರಿಸಿಕೊಳ್ಳುವ ಹಂಬಲ ಇದರ ಹಿಂದೆ ಇರಬಹುದು. ನಿಜವಾಗಿಯೂ ಪರಸ್ಪರ ಅನ್ಯೋನ್ಯವಾಗಿರುವವರು ತಮ್ಮ ಪ್ರೀತಿಯನ್ನು ಜಗಜ್ಜಾಹೀರು ಮಾಡುವ ಅಗತ್ಯವಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಎಚ್ಚರಿಕೆ

ಖ್ಯಾತ ಸಂಖ್ಯಾಶಾಸ್ತ್ರಜ್ಞರಾದ ಅರವಿಂದ ರತನ್ ಅವರು ಈ ಬಗ್ಗೆ ಕುತೂಹಲಕಾರಿ ಅಂಶವೊಂದನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ದಂಪತಿಗಳು ಅತಿಯಾಗಿ ಫೋಟೋಗಳನ್ನು ಅಪ್‌ಲೋಡ್ ಮಾಡುವುದರಿಂದ ಕೆಲವು ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶುಕ್ರನ ಬಲ ಕುಸಿತ: ಶುಕ್ರ ಗ್ರಹವು ಪ್ರೀತಿ ಮತ್ತು ಖಾಸಗಿತನಕ್ಕೆ (Privacy) ಸಂಬಂಧಿಸಿದ್ದು. ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದಾಗ ಶುಕ್ರನ ಎನರ್ಜಿ ವೀಕ್ ಆಗುವ ಸಾಧ್ಯತೆ ಇರುತ್ತದೆ.

ರಾಹುವಿನ ಪ್ರಭಾವ: ಅತಿಯಾದ ಪ್ರದರ್ಶನದಿಂದ ರಾಹುವಿನ ಎಫೆಕ್ಟ್ ಶುರುವಾಗಿ, ಸಂಬಂಧದಲ್ಲಿ ಗೊಂದಲ ಅಥವಾ ಭ್ರಮೆಗಳು (Illusions) ಸೃಷ್ಟಿಯಾಗಬಹುದು.

ಸಂಬಂಧದಲ್ಲಿ ದುರ್ಬಲತೆ: “ನಾವು ತುಂಬಾ ಚೆನ್ನಾಗಿದ್ದೇವೆ” ಎಂದು ತೋರಿಸಿಕೊಳ್ಳಲು ಹೋಗಿ ಸಂಬಂಧದಲ್ಲಿ ಕ್ರಮೇಣ ವೀಕ್ನೆಸ್ ಕಾಣಿಸಿಕೊಳ್ಳಬಹುದು.

ಪ್ರೀತಿ ಎಂಬುದು ನಾಲ್ಕು ಗೋಡೆಗಳ ಮಧ್ಯೆ ಇರಬೇಕಾದ ಸುಂದರ ಅನುಭವವೋ ಅಥವಾ ನಾಲ್ಕು ಸಾವಿರ ಜನರಿಗೆ ತೋರಿಸಬೇಕಾದ ಪ್ರದರ್ಶನವೋ? ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಂಗಾತಿಯನ್ನು ಅತಿಯಾಗಿ ಹೊಗಳುವ ಮತ್ತು ಫೋಟೋ ಹಂಚಿಕೊಳ್ಳುವ ಟ್ರೆಂಡ್ ಜೋರಾಗಿದೆ.

ಆದರೆ, ಈ ರೀತಿ ಪ್ರೀತಿಯನ್ನು ಸಾರ್ವಜನಿಕವಾಗಿ ಹರಾಜು ಹಾಕುವುದರಿಂದ ನಿಮ್ಮ ಜಾತಕದಲ್ಲಿರುವ ಶುಕ್ರ ಗ್ರಹದ ಶಕ್ತಿ ಕುಂದಬಹುದು ಮತ್ತು ಅಶಾಂತಿಯ ಸಂಕೇತವಾದ ರಾಹುವಿನ ಪ್ರಭಾವ ಹೆಚ್ಚಾಗಬಹುದು ಎಂದು ಸಂಖ್ಯಾಶಾಸ್ತ್ರಜ್ಞರು ಎಚ್ಚರಿಸುತ್ತಿದ್ದಾರೆ. ಸಂಬಂಧದ ಗಾಢತೆ ಸ್ಟೇಟಸ್‌ಗಳಲ್ಲಲ್ಲ, ಪರಸ್ಪರರ ವಿಶ್ವಾಸದಲ್ಲಿರಲಿ ಎಂಬುದು ತಜ್ಞರ ಕಿವಿಮಾತು

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular