HomeLatest Newsಸುಗ್ಗಿ ಹಬ್ಬ ಸಂಕ್ರಾಂತಿ ದಿನವೇ ರಾಜ್ಯದಲ್ಲಿ ಘೋರ ದುರಂತ: ಪವಿತ್ರ ಸ್ನಾನ ವೇಳೆ ನಾಲ್ವರು ನೀರು...

ಸುಗ್ಗಿ ಹಬ್ಬ ಸಂಕ್ರಾಂತಿ ದಿನವೇ ರಾಜ್ಯದಲ್ಲಿ ಘೋರ ದುರಂತ: ಪವಿತ್ರ ಸ್ನಾನ ವೇಳೆ ನಾಲ್ವರು ನೀರು ಪಾಲು

ಬೆಂಗಳೂರು: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಸಂಭ್ರಮದ ನಡುವೆ ಪವಿತ್ರ ಸ್ನಾನಕ್ಕೆ ತೆರಳಿದ್ದ ನಾಲ್ವರು ನೀರು ಪಾಲಾದ ಪ್ರತ್ಯೇಕ ಘಟನೆ ರಾಜ್ಯದಲ್ಲಿ ನಡೆದಿವೆ.

ಯುವಕರಿಬ್ಬರು ತಂದೆಯ ಎದುರೇ ಕಲ್ಲು ಕ್ವಾರಿಯ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಜಾಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಮನೋಜ್ ಮೌನೇಶ ಬಡಿಗೇರ(17), ಪ್ರಮೋದ್ ಮಂಜು ಬಡಿಗೇರ(17) ಮೃತಪಟ್ಟವರು. ಸಹೋದರರ ಮಕ್ಕಳಾಗಿರುವ ಇಬ್ಬರು ಪ್ರಥಮ ಪಿಯುಸಿ ಓದುತ್ತಿದ್ದರು. ತಂದೆ ಮಂಜು ಬಡಿಗೇರ ಜೊತೆಗೆ ಮನೋಜ್, ಪ್ರಮೋದ್ ಸ್ನೇಹಿತರೊಂದಿಗೆ ಸಮೀಪದ ಕ್ವಾರಿಯಲ್ಲಿ ಸ್ನಾನಕ್ಕೆ ಹೋಗಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮಾನ್ವಿ ತಾಲೂಕಿನ ಚಿಕ್ಕಪಲರ್ವಿಯಲ್ಲಿ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಿದ್ದ ರಾಜಲದಿನ್ನಿ ಗ್ರಾಮದ ವಂಶಿ ಸುರೇಂದ್ರ ಗೌಡ(17) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ಪುಣ್ಯ ಸ್ನಾನಕ್ಕಾಗಿ ಸ್ನೇಹಿತರೊಂದಿಗೆ ತುಂಗಭದ್ರಾ ನದಿಗೆ ತೆರಳಿದ್ದು, ಈಜಲಾಗದೇ ಅವರು ನೀರುಪಾಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾವೇರಿ ತಾಲೂಕಿನ ಮಣ್ಣೂರು ಗ್ರಾಮದ ವರದಾ ನದಿಯಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಎತ್ತಿನ ಮೈ ತೊಳೆಯಲು ಹೋಗಿದ್ದ ಹಳೆಮೇಲ್ಮರಿ ಗ್ರಾಮದ ಸಚಿನ್ ಬಸವರಾಜ ಅಂಗಡಿ(22) ಮೃತಪಟ್ಟಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular