HomeIndiaBIG NEWS: ಗ್ರೈಂಡರ್ ಯಂತ್ರಕ್ಕೆ ಸಿಲುಕಿ ಯುವಕ ದುರ್ಮರಣ: ಫುಡ್ ಸ್ಟಾಲ್ ಮಾಲೀಕನ ವಿರುದ್ಧ FIR...

BIG NEWS: ಗ್ರೈಂಡರ್ ಯಂತ್ರಕ್ಕೆ ಸಿಲುಕಿ ಯುವಕ ದುರ್ಮರಣ: ಫುಡ್ ಸ್ಟಾಲ್ ಮಾಲೀಕನ ವಿರುದ್ಧ FIR ದಾಖಲು

ಮುಂಬೈ: ಚೈನಿಸ್ ಫುಡ್ ಸ್ಟಾಲ್ ನ ಗ್ರೈಂಡರ್ ಯಂತ್ರದಲ್ಲಿ ಸಿಲುಕಿ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ಮುಂಬೈನ ವರ್ಲಿಯಲ್ಲಿ ನಡೆದಿದೆ.

19 ವರ್ಷದ ನಾರಾಯಣ ಯಾದವ್ ಮೃತ ಯುವಕ. ಜಾರ್ಖಂಡ್ ಮೂಲದ ನಾರಾಯಣ, ಮೂರ್ನಾಲ್ಕು ತುಂಗಳ ಹಿಂದಷ್ಟೇ ಕೆಲಸಕ್ಕೆಸೇರಿದ್ದ. ಸುಅರಕ್ಷತಾ ತರಬೇತಿಯನ್ನೂ ಯುವಕನಿಗೆ ನೀಡಿರಲಿಲ್ಲ ಎನ್ನಲಾಗಿದೆ.

ಫುಡ್ ಗ್ರೈಂಡರ್ ಬಳಿ ಕೆಲಸ ಮಾಡುತ್ತಿದ್ದಗ ಯುವಕನ ಶರ್ಟ್ ಗ್ರೈಂಡರ್ ಗೆ ಸಿಲುಕಿಕೊಂಡಿದ್ದು, ನೋಡನೋಡುತ್ತಿದ್ದಂತೆ ಯುವಕನೇ ಗ್ರೈಂಡರ್ ಒಳಗೆ ಹೋಗಿ ಬಿದ್ದಿದ್ದಾನೆ. ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚೈನೀಸ್ ಫುಡ್ ಸ್ಟಾಲ್ ಮಾಲೀಕ ಸಚಿನ ಕೋಥೇಕರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular