HomeKarnataka`BPL’ ರೇಷನ್ ಕಾರ್ಡ್ ಹೊಂದಿರುವವರಿಗೆ `ಆಹಾರ ಇಲಾಖೆ’ಯಿಂದ ಮಹತ್ವದ ಮಾಹಿತಿ

`BPL’ ರೇಷನ್ ಕಾರ್ಡ್ ಹೊಂದಿರುವವರಿಗೆ `ಆಹಾರ ಇಲಾಖೆ’ಯಿಂದ ಮಹತ್ವದ ಮಾಹಿತಿ

ಬೆಂಗಳೂರು :   ಬಿಪಿಎಲ್ ಕಾರ್ಡ್ ದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 6 ತಿಂಗಳಿನಿಂದ ಪಡಿತರ ಪಡೆಯದ ಪಡಿತರ ಚೀಟಿ ರದ್ದುಪಡಿಸಲು ಮುಂದಾಗಿದೆ ಎನ್ನಲಾಗಿದೆ.

ಕೆಲವರು ಕಳೆದ 6 ತಿಂಗಳಿನಿಂದ ರೇಷನ್ ಪಡೆದಿಲ್ಲ ಎಂಬುದು ತಿಳಿದು ಬಂದಿದ್ದು, ಇಂತಹವರಿಗೆ ಆಹಾರ ಇಲಾಖೆ ಶಾಕ್ ನೀಡಿದ್ದು, ರೇಷನ್ ಪಡೆಯದವರ ರೇಷನ್ ಕಾರ್ಡ್ ಅಮಾನತು ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ.ಯಾರು ಪ್ರತಿ ತಿಂಗಳು ರೇಷನ್ ಪಡೆಯುದಿಲ್ಲವೋ ಅಂತಹವರ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಮುಂದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರು ತಿಂಗಳಿಂದ ಒಟ್ಟು 3.26 ಲಕ್ಷ ಕುಟುಂಬ ಪಡಿತರವನ್ನೇ ಪಡೆದಿಲ್ಲ, ಈ ವಾರದಲ್ಲಿ 3.26 ಲಕ್ಷ ಕಾರ್ಡ್​ಗಳು ರದ್ದಾಗಲಿವೆ ಎನ್ನಲಾಗಿದ್ದು, ರಾಜ್ಯದಲ್ಲಿ ಒಟ್ಟು 1 ಕೋಟಿ 52 ಲಕ್ಷದಷ್ಟು ಕಾರ್ಡ್​ದಾರರಿದ್ದಾರೆ, BPL-1,27,82,893 ರೇಷನ್‌ ಕಾರ್ಡ್​ಗಳಿವೆ. 4.37 ಕೋಟಿ ಜನರು ರೇಷನ್ ಪಡೆದುಕೊಳ್ಳುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular