HomeRecipiesಆಲೂಗಡ್ಡೆ ಬೇಗ ಬೇಯಬೇಕೆಂದರೆ ಈ ವಿಧಾನ ಅನುಸರಿಸಿ

ಆಲೂಗಡ್ಡೆ ಬೇಗ ಬೇಯಬೇಕೆಂದರೆ ಈ ವಿಧಾನ ಅನುಸರಿಸಿ

ಆಲೂಗಡ್ಡೆ ಹಾಕಿ ಮಾಡಿದ ಅಡುಗೆ ಬಹಳ ರುಚಿಯಾಗಿರುತ್ತದೆ. ಹಾಗಾಗಿ ಹೆಚ್ಚಿನವರು ಆಲೂಗಡ್ಡೆ ಬಳಸಿ ಮಾಡಿದ ಅಡುಗೆ ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಅದು ಬೇಯುವುದು ತುಂಬಾ ತಡವಾಗುತ್ತದೆ. ಹಾಗಾಗಿ ಆಲೂಗಡ್ಡೆ ಬೇಗ ಬೇಯಲು ಈ ವಿಧಾನ ಅನುಸರಿಸಿ.

*ಆಲೂಗಡ್ಡೆ ಸಿಪ್ಪೆಯ ಜೊತೆ ಕುಕ್ಕರ್ ನಲ್ಲಿ ಬೇಯಿಸುವಾಗ 2 ಭಾಗಗಳಾಗಿ ಕತ್ತರಿಸಿ ಬೇಯಿಸಿ ಇದರಿಂದ ಅದು ಬಹಳ ಬೇಗನೆ ಬೇಯುತ್ತದೆ. ಹಾಗೇ ಆಲೂಗಡ್ಡೆ ಬೇಯಿಸುವಾಗ ಉಪ್ಪನ್ನು ಹಾಕಿದರೂ ಕೂಡ ಬೇಗ ಬೇಯುತ್ತದೆ.

 *ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಬೇಯಿಸುವಾಗ ಸಣ್ಣ ತುಂಡುಗಳಾಗಿ ಕತ್ತರಿಸಿ ಬೇಯಿಸಿ. ಇದರಿಂದ ಬೇಗ ಬೇಯುತ್ತದೆ. ಅದರ ಜೊತೆ ಉಪ್ಪನ್ನು ಕೂಡ ಸೇರಿಸಿ.

*ಆಲೂಗಡ್ಡೆಯನ್ನು ತಣ್ಣೀರಿನಲ್ಲಿ ಹಾಕಿ ಬೇಯಿಸಿದರೆ ಬೇಯುವುದು ತುಂಬಾ ತಡವಾಗುತ್ತದೆ. ಬಿಸಿ ನೀರಿನಲ್ಲಿ ಹಾಕಿ ಬೇಯಿಸಿದರೆ ಬಹಳ ಬೇಗ ಬೇಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular