HomeLatest Newsʼಬಾತ್ ಟವಲ್ʼ ಸ್ವಚ್ಚಗೊಳಿಸುವಾಗ ಅನುಸರಿಸಿ ಈ ಟಿಪ್ಸ್

ʼಬಾತ್ ಟವಲ್ʼ ಸ್ವಚ್ಚಗೊಳಿಸುವಾಗ ಅನುಸರಿಸಿ ಈ ಟಿಪ್ಸ್

ನಿಮ್ಮ ಬಾತ್ ಟವಲ್ ಮೃದುತ್ವ ಕಳೆದುಕೊಂಡು ಗಡುಸಾಗಿದೆಯೇ, ಮೈ ಕೈ ಒರೆಸುವಾಗ ಹಿತವಾದ ಅನುಭವ ಆಗುವ ಬದಲು ಕಿರಿಕಿರಿಯಾಗುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ.

ಹೊಸ ಟವಲ್ ಆಗಿದ್ದರೂ ನಾಲ್ಕಾರು ಬಾರಿ ಬಳಸಿದ ಬಳಿಕ ಅದರ ಮೃದುತ್ವ ದೂರವಾಗಿ ಬಿಡುತ್ತದೆ. ಅದನ್ನು ಮರಳಿ ಪಡೆಯಲು ಬಾತ್ ಟವಲ್ ಅನ್ನು ಬೆಚ್ಚಗಿನ ನೀರಿನಲ್ಲೇ ತೊಳೆಯಬೇಕು. ಲಿಕ್ವಿಡ್ ಡಿಟರ್ಜೆಂಟ್ ಬದಲು ಬಿಳಿ ವಿನೆಗರ್ ಬಳಸಿ. ಇದು ಬಟ್ಟೆಯನ್ನು ಮೃದುವಾಗಿಡುತ್ತದೆ.

ತೊಳೆಯುವಾಗ ಬೇಕಿಂಗ್ ಸೋಡಾ ಬಳಸುವುದರಿಂದಲೂ ಬಟ್ಟೆಯನ್ನು ಮೃದುವಾಗಿಸಬಹುದು. ನಿಮ್ಮ ನಿತ್ಯದ ಡಿಟರ್ಜೆಂಟ್ ಜೊತೆ ಅರ್ಧ ಚಮಚ ಅಡುಗೆ ಸೋಡಾ ಬಳಸಿ. ಇದು ವಾಸನೆಯನ್ನೂ ಹೋಗಲಾಡಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟವೆಲ್ ತೊಳೆದ ಬಳಿಕ ಸರಿಯಾಗಿ ಹಿಂಡಿ. ಗಾಳಿಯಲ್ಲಿ ಒಣಗಿಸಿ. ಡ್ರೈಯರ್ ನಿಂದ ತೆಗೆದ ಬಳಿಕ ಸರಿಯಾಗಿ ಕೊಡವಿ. ಒಣಗಿಸಲು ಸ್ಥಳವಿಲ್ಲ ಎಂಬ ಕಾರಣಕ್ಕೆ ಯಾವುದೋ ಬಟ್ಟೆಯ ಮೇಲೆ ಹಾಕದಿರಿ. ಸರಿಯಾಗಿ ಒಣಗಿಸುವುದು ಕೂಡಾ ಬಹುಮುಖ್ಯ.

For Latest News Updates, Join Our Whatsapp Community🚩
RELATED ARTICLES

Most Popular