HomeBeautyಕೂದಲ ರಕ್ಷಣೆ ಮಾಡಲು ಫಾಲೋ ಮಾಡಿ ಈ ಟಿಪ್ಸ್

ಕೂದಲ ರಕ್ಷಣೆ ಮಾಡಲು ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆಯಲ್ಲಿ ಕೂದಲಿನ ರಕ್ಷಣೆ ಬಹಳ ಅವಶ್ಯಕ. ಬೆವರು ಹಾಗೂ ಸೂರ್ಯನ ಕಿರಣದಿಂದಾಗಿ ಕೂದಲು ತೇವಾಂಶ ಕಳೆದುಕೊಂಡು ಹಾಳಾಗುತ್ತದೆ. ಕೂದಲು ಉದುರುವ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕೂದಲಿಗೆ ಹೆಚ್ಚಿನ ಆರೈಕೆ ಅಗತ್ಯ. ಮನೆ ಮದ್ದು ಬಳಸಿ ಕೂದಲಿನ ಸೌಂದರ್ಯ ಕಾಪಾಡಿಕೊಳ್ಳಿ.

ಸಾಸಿವೆ ಎಣ್ಣೆ : ಶುಷ್ಕತೆ ದೂರ ಮಾಡಿ ಸುಂದರ ಕೂದಲು ಪಡೆಯಲು ಮಹಿಳೆಯರು ಶಾಂಪೂ ನಂತ್ರ ಕಂಡೀಷನರ್ ಬಳಸ್ತಾರೆ. ಆದ್ರೆ ಇದು ಕೆಲ ದಿನ ಮಾತ್ರ. ನಂತ್ರ ಕೂದಲು ಉದುರುವ ಪ್ರಮಾಣ ಜಾಸ್ತಿಯಾಗುತ್ತದೆ. ಹಾಗಾಗಿ ಶಾಂಪೂ, ಕಂಡೀಷನರ್ ಬಳಸುವ ಅರ್ಧ ಗಂಟೆ ಮೊದಲು ಸಾಸಿವೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಳ್ಳಿ. ಇದ್ರಿಂದ ಕೂದಲು ಶುಷ್ಕವಾಗದೆ ಹೊಳಪು ಪಡೆಯುತ್ತದೆ.

ಮೆಹಂದಿ : ಕೆಲವರ ಕೂದಲು ಬಹು ಬೇಗ ಆಯ್ಲಿಯಾಗುತ್ತದೆ. ಎಣ್ಣೆಯುಕ್ತ ಕೂದಲು ಕಿರಿಕಿರಿಯುಂಟು ಮಾಡುತ್ತದೆ. ಎಣ್ಣೆಯುಕ್ತ ಕೂದಲು ಹೊಂದಿದವರಿಗೆ ಮೆಹಂದಿ ಬೆಸ್ಟ್. ಮೆಹಂದಿ ಪುಡಿಗೆ ಒಂದು ಚಮಚ ಮೊಸರು, ನೀರು ಸೇರಿಸಿ ಪೇಸ್ಟ್ ಮಾಡಿ ಅದನ್ನು ಕೂದಲಿಗೆ ಹಚ್ಚಿಕೊಳ್ಳಿ. 15 ನಿಮಿಷದ ನಂತ್ರ ಕೂದಲನ್ನು ಸ್ವಚ್ಛವಾಗಿ ತೊಳೆಯಿರಿ. ಇದ್ರಿಂದ ಕೂದಲಿಗೆ ಪ್ರಾಕೃತಿಕ ಬಣ್ಣ ಬರುವ ಜೊತೆಗೆ ಎಣ್ಣೆ ಸಮಸ್ಯೆ ಕಡಿಮೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular