HomeIndiaಪರಮ ವೀರಚಕ್ರ ಪುರಸ್ಕೃತ ಯೋಧನಿಗೆ ವಿಮಾನದಲ್ಲಿ ಸಿಗ್ತು ಸನ್ಮಾನ : ವಿಡಿಯೋ ವೈರಲ್​

ಪರಮ ವೀರಚಕ್ರ ಪುರಸ್ಕೃತ ಯೋಧನಿಗೆ ವಿಮಾನದಲ್ಲಿ ಸಿಗ್ತು ಸನ್ಮಾನ : ವಿಡಿಯೋ ವೈರಲ್​

ದೇಶಕ್ಕಾಗಿ ಹೋರಾಡುವವರ ಅಥವಾ ಸಶಸ್ತ್ರ ಪಡೆಯ ಯಾವುದೇ ಅಧಿಕಾರಿಗಳನ್ನು ಭೇಟಿಯಾಗೋದು ಹೆಮ್ಮೆಯ ವಿಷಯವಲ್ಲದೇ ಇನ್ನೇನು..? ಇತ್ತೀಚೆಗಷ್ಟೇ ವಿಮಾನವೊಂದರಲ್ಲಿ ವೀರ ಯೋಧನನ್ನು ಸನ್ಮಾನಿಸುವ ವಿಡಿಯೋ ಸಖತ್​ ವೈರಲ್​ ಆಗಿದೆ.

ಈ ಸ್ಪೆಷಲ್​ ವಿಡಿಯೋವನ್ನು ಇಂಡಿಗೋ ಏರ್​ಲೈನ್ಸ್​ ಪೋಸ್ಟ್​ ಮಾಡಿದೆ. ಭಾನುವಾರದಂದು ಪುಣೆಗೆ ಹೊರಡುತ್ತಿದ್ದ ವಿಮಾನದಲ್ಲಿ ಪರಮವೀರಚಕ್ರ ಪ್ರಶಸ್ತಿ ಪುರಸ್ಕೃತ ಸುಬೇದಾರ್​​​ ಸಂಜಯ್​ಕುಮಾರ್​​ ಕೂಡ ಇದ್ದರು. ಸುಬೇದಾರ್​​​​ ಸಂಜಯ್​ ಕುಮಾರ್​ ಅಸಾಧಾರಣ ಶೌರ್ಯವನ್ನು ಗೌರವಿಸುವ ಸಲುವಾಗಿ ಅವರ ಸಾಧನೆಗಳನ್ನು ಪ್ರಯಾಣಿಕರ ಜೊತೆಯಲ್ಲಿ ಹಂಚಿಕೊಂಡಿದೆ. ರಾಷ್ಟ್ರಕ್ಕಾಗಿ ಸಂಜಯ್​ ಕುಮಾರ್​ ಮಾಡಿದ ಸೇವೆಯನ್ನು ಇಂಡಿಗೋ ಏರ್​ಲೈನ್ಸ್​ ಕೊಂಡಾಡಿದೆ.

ವಿಮಾನಯಾನ ಸಂಸ್ಥೆಯು ಈ ವಿಡಿಯೋ ಟ್ವೀಟ್​ ಮಾಡಿದ್ದು, ವೀರನೊಂದಿಗೆ ನಾವಿಂದು ಹಾರುತ್ತಿದ್ದೇವೆ. ಸುಬೇದಾರ್​​ ಮೇಜರ್​ ಸಂಜಯ್​ ಕುಮಾರ್​ ಜಿ. ಜೀವಂತ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಎಂದು ಕೊಂಡಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular