
ಹೌದು. ಇಕ್ಸ್ ಚಿಕ್ ಎಂಬ ಈ ಲಸಿಕೆಗೆ ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆ ಒಪ್ಪಿಗೆ ನೀಡಿದೆ. ಇದನ್ನು ಸ್ನಾಯುಗಳಿಗೆ ಇಂಜೆಕ್ಷನ್ ಮೂಲ ನೀಡಲಾಗುತ್ತದೆ ಎಂದು ಎಫ್ ಡಿ ಎ ನಿರ್ದೇಶಕ ಹೇಳಿದ್ದಾರೆ.
18 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆಯನ್ನು ನೀಡಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಈ ಲಸಿಕೆ ಪಡೆದುಕೊಂಡ 266 ಮಂದಿಯಲ್ಲಿ ಪ್ರತಿಕಾಯ ಪ್ರಮಾಣ ಹೆಚ್ಚಾಗಿದೆ ಎಂದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಸುಮಾರು 3000 ಕ್ಕೂ ಹೆಚ್ಚು ಮಂದಿಗೆ ಈ ಲಸಿಕೆಯನ್ನು ನೀಡಿ ಸುರಕ್ಷತೆ ಖಚಿತಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

