HomeKarnatakaBREAKING: ಸುಗಂಧದ್ರವ್ಯ ಫ್ಯಾಕ್ಟರಿ ಅಗ್ನಿ ದುರಂತ ಪ್ರಕರಣ: ಮತ್ತೊಬ್ಬ ಬಾಲಕ ಸಾವು: ಸಾವಿನ ಸಂಖ್ಯೆ 5ಕ್ಕೆ...

BREAKING: ಸುಗಂಧದ್ರವ್ಯ ಫ್ಯಾಕ್ಟರಿ ಅಗ್ನಿ ದುರಂತ ಪ್ರಕರಣ: ಮತ್ತೊಬ್ಬ ಬಾಲಕ ಸಾವು: ಸಾವಿನ ಸಂಖ್ಯೆ 5ಕ್ಕೆ ಏರಿಕೆ

ಬೆಂಗಳೂರು: ಪರ್ಫ್ಯೂಮ್ ಫ್ಯಾಕ್ಟರಿ ಗೋದಾನಿನಲ್ಲಿ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೊಬ್ಬ ಬಾಲಕ ಸಾವನ್ನಪ್ಪಿದ್ದಾನೆ. ಇದರೊಂದಿಗೆ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ 15 ವರ್ಷದ ರಿಯಾನ್ ಭಾಷಾ ಮೃತಪಟ್ಟಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ನಿನ್ನೆ ಚಿಕಿತ್ಸೆ ಫಲಿಸದೇ 15 ವರ್ಷದ ಬಾಲಕ ಸಾಜಿದ್ ಮೃತಪಟ್ಟಿದ್ದ. ರಿಯಾನ್ ತನ್ನ ತಂದೆಗೆ ಊಟ ಕೊಡಲು ಬಂದಿದ್ದಾಗ ದುರಂತ ಸಂಭವಿಸಿತ್ತು. ರಿಯಾನ್, ಸಂಬಂಧಿ ಸಾಜಿದ್ ಇಬ್ಬರೂ ಫ್ಯಾಕ್ಟರಿಗೆ ಬಂದಿದ್ದರು. ಚಿಕಿತ್ಸೆ ಫಲಿಸದೇ ಗಾಯಗೊಂಡಿದ್ದ ಇಬ್ಬರೂ ಬಾಲಕರು ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ. ಕುಂಬಳಗೋಡು ಠಾಣಾ ವ್ಯಕ್ತಿಯಲ್ಲಿ ಅಗ್ನಿ ದುರಂತ ಸಂಭವಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular