HomeKarnatakaBREAKING NEWS: ಆಕಸ್ಮಿಕ ಬೆಂಕಿಯಿಂದ ಬೀದಿಗೆ ಬಿದ್ದ ಬದುಕು: 8 ಅಂಗಡಿ ಸುಟ್ಟು ಕರಕಲು

BREAKING NEWS: ಆಕಸ್ಮಿಕ ಬೆಂಕಿಯಿಂದ ಬೀದಿಗೆ ಬಿದ್ದ ಬದುಕು: 8 ಅಂಗಡಿ ಸುಟ್ಟು ಕರಕಲು

ಕಲಬುರಗಿ: ಆಕಸ್ಮಿಕ ಬೆಂಕಿಯಿಂದಾಗಿ 8 ಅಂಗಡಿಗಳು ಸುಟ್ಟು ಭಸ್ಮವಾದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ.

ಬುಟ್ನಾಳ್ ರಸ್ತೆಯಲ್ಲಿ 8 ಅಂಗಡಿಗಳು ಸುಟ್ಟು ಕರಕಲಾಗಿವೆ. ದೇವೇಂದ್ರ, ಮನೋಹರ್, ಶ್ರೀಶೈಲ, ಪ್ರಕಾಶ್, ಮೋಹನ್, ಬಸವರಾಜ್ ಎಂಬುವವರ ಅಂಗಡಿಗಳು ಬೆಂಕಿಗಾಹುತಿಯಾಗಿವೆ.

ಬೆಂಕಿಯಿಂದಾಗಿ ಅಂಗಡಿಯಲ್ಲಿದ್ದ ಸಾಗುವಾನಿ ಬಾಗಿಲುಗಳು, ಯಂತ್ರಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಮಲ್ಲಣ್ಣ ಯಲಗೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular