HomeEntertainmentಸುವರ್ಣ ಜಾಕ್ಪಾಟ್ ಕಾರ್ಯಕ್ರಮದಲ್ಲಿ 'ಫಾರ್ ರಿಜಿಸ್ಟ್ರೇಷನ್' ಚಿತ್ರತಂಡ

ಸುವರ್ಣ ಜಾಕ್ಪಾಟ್ ಕಾರ್ಯಕ್ರಮದಲ್ಲಿ ‘ಫಾರ್ ರಿಜಿಸ್ಟ್ರೇಷನ್’ ಚಿತ್ರತಂಡ

ಪೃಥ್ವಿ ಅಂಬಾರ್ ಮತ್ತು ಮಿಲನ ನಾಗರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಫಾರ್ ರಿಜಿಸ್ಟ್ರೇಷನ್’ ಚಿತ್ರ ಬಿಡುಗಡೆಯಾಗಿ ರಾಜ್ಯದಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದ್ದು, ಪ್ರೇಕ್ಷಕ ಪ್ರಭುಗಳು ಫಿದಾ ಆಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮವಾದ ಸುವರ್ಣ ಜಾಕ್ಪಾಟ್ ವೇದಿಕೆಯಲ್ಲಿ ಈ ಚಿತ್ರದ ಕಲಾವಿದರಾದ ಪೃಥ್ವಿ ಅಂಬಾರ್, ಮಿಲನ ನಾಗರಾಜ್, ಸಿಹಿ ಕಹಿ ಚಂದ್ರು, ಮತ್ತು ಸುಧಾ ಬೆಳವಾಡಿ ಆಗಮಿಸಲಿದ್ದಾರೆ. ಈ ಕುರಿತು ಮಿಲನ ನಾಗರಾಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಈ ಚಿತ್ರವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸಿದ್ದು, ನಿಶ್ಚಲ್ ಫಿಲಂಸ್ ಬ್ಯಾನರ್ ನಡಿ ನವೀನ್ ರಾವ್ ನಿರ್ಮಾಣ ಮಾಡಿದ್ದಾರೆ. ಪೃಥ್ವಿ  ಅಂಬಾರ್ ಮತ್ತು ಮಿಲನ ನಾಗರಾಜ್ ಸೇರಿದಂತೆ ರವಿಶಂಕರ್, ತಬಲ ನಾಣಿ, ಸುಧಾ ಬೆಳವಾಡಿ, ಬಾಬು ಈರಣ್ಣಯ್ಯ, ಸ್ವಾತಿ, ರಮೇಶ್ ಭಟ್, ಸಿಹಿ ಕಹಿ ಚಂದ್ರು, ಅರವಿಂದ್, ಬ್ಯಾಂಕ್ ಜನಾರ್ದನ್,  ತೆರೆ ಹಂಚಿಕೊಂಡಿದ್ದಾರೆ.

ಮನು ಸಂಕಲನ, ಅಭಿಲಾಶ್ ಕಲ್ಲತ್ತಿ ಹಾಗೂ ಅಭಿಷೇಕ್ ಕಾಸರಗೋಡು ಛಾಯಾಗ್ರಹಣವಿದೆ. ಆರ್ ಕೆ ಹರೀಶ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular