HomeLatest Newsಕೂಲಿ ಕಾರ್ಮಿಕರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

ಕೂಲಿ ಕಾರ್ಮಿಕರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಕೂಲಿಕಾರ್ಮಿಕರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಪ್ಲಾಂಟೇಶನ್ ಮರಗಳ ಕಡಿತಲೆ ಕೆಲಸಕ್ಕಾಗಿ ಧಾರವಾಡದಿಂದ ಬಂದಿದ್ದ ಕಾರ್ಮಿಕರ ನಡುವೆ ಜಗಳವಾಗಿ ಒಬ್ಬನ ಕೊಲೆಯಾಗಿದೆ. ಕಲಘಟಗಿ ತಾಲೂಕಿನ ದೇವಿಕೊಪ್ಪ ಸಮೀಪದ ಈಚನಹಳ್ಳಿ ತಾಂಡಾದ ಪರಶುರಾಮ ರಾಮಪ್ಪ ಲಮಾಣಿ ಕೊಲೆಯಾದವರು. ಅದೇ ತಾಂಡಾದಿಂದ ಆಗಮಿಸಿದ್ದ ಕಾರ್ಮಿಕ ಪರಶುರಾಮ ಶೆಟ್ಟಪ್ಪ ತಂಬೂರಿ ಹಾಗೂ ಅರುಣ್ ಪುನ್ನಪ್ಪ ಲಮಾಣಿ ಕೊಲೆ ಆರೋಪಿಗಳಾಗಿದ್ದಾರೆ.

ಮೇ ತಿಂಗಳಿನಲ್ಲಿ ಕೆಲಸಕ್ಕೆ ಬಂದಿದ್ದ ಇವರು ಸೊನಲೆ ಗ್ರಾಮದ ಕುಮಾರ್ ಅವರ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ಕೆಲವು ದಿನಗಳ ಹಿಂದೆ ಮೃತ ವ್ಯಕ್ತಿ ಪರಶುರಾಮ ಊರಿಗೆ ಹೋಗಿದ್ದು, ಶನಿವಾರ ಕೆಲಸಕ್ಕೆ ಬಂದಿದ್ದ. ಶನಿವಾರ ರಾತ್ರಿ ಬಾಡಿಗೆ ಮನೆಯಲ್ಲಿ ಕಾರ್ಮಿಕರು ಒಟ್ಟಿಗೆ ಮದ್ಯ ಸೇವಿಸಿದ್ದು, ಅರುಣ್ ಸಂಸಾರದ ವಿಚಾರವಾಗಿ ಪರಶುರಾಮ ರಾಮಪ್ಪ ಲಮಾಣಿ ಬುದ್ಧಿವಾದ ಹೇಳಿದ್ದ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಸ್ತ್ರಿ ಹಾಗೂ ಇತರ ಕಾರ್ಮಿಕರು ಗಲಾಟೆ ಬಿಡಿಸಿ ಇಬ್ಬರನ್ನು ಸುಮ್ಮನಾಗಿಸಿದ್ದಾರೆ. ಆದರೆ, ಬುದ್ಧಿ ಹೇಳಿದ್ದಕ್ಕೆ ಅರುಣ್ ಮತ್ತು ಪರಶುರಾಮ ಶೆಟ್ಟಪ್ಪ ಮತ್ತೆ ಜಗಳ ತೆಗೆದು ಕುತ್ತಿಗೆಗೆ ಚಾಕುವಿನಿಂದ ಇರಿದ ಪರಿಣಾಮ ಪರಶುರಾಮ ರಾಮಪ್ಪ ಲಮಾಣಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಬಂಧಿಸಿದ ಪಿಎಸ್ಐ ಶಂಕರಗೌಡ ಪಾಟೀಲ್ ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular