HomeKarnatakaಊಟ ಬೇಕೆಂದು ಅತ್ತಿದ್ದಕ್ಕೆ ಮಗನ್ನನ್ನೇ ಹೊಡೆದು ಕೊಂದ ತಂದೆ: ಪತಿ ವಿರುದ್ಧ ಪತ್ನಿ ಆರೋಪ

ಊಟ ಬೇಕೆಂದು ಅತ್ತಿದ್ದಕ್ಕೆ ಮಗನ್ನನ್ನೇ ಹೊಡೆದು ಕೊಂದ ತಂದೆ: ಪತಿ ವಿರುದ್ಧ ಪತ್ನಿ ಆರೋಪ

ಚಿತ್ರದುರ್ಗ: ಊಟ ಬೇಕೆಂದು ಅತ್ತಿದ್ದಕ್ಕೆ ತಂದೆಯೊಬ್ಬ 6 ವರ್ಷದ ಮಗನನ್ನೇ ಹೊಡೆದು ಕೊಂದ ಆರೋಪ ಕೇಳಿಬಂದಿದೆ. ಮಗನನ್ನೇ ತಂದೆ ಕೊಲೆ ಮಾಡಿದ್ದಾಗಿ ಆರೋಪಿಸಿ ಪತ್ನಿಯೇ ಪತಿಯ ವಿರುದ್ಧ ದೂರು ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಳೇ ರಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 6 ವರ್ಷದ ಮಂಜುನಾಥ್ ಮೃತ ಬಾಲಕ. ಪುಟ್ಟ ಬಾಲಕ ಹಸಿವಿನಿಂದ ಊಟಬೇಕೆಂದು ಅಳುತ್ತಿದ್ದ. ತಾಯಿ ಪಕ್ಕದ ಮನೆಗೆ ಊಟ ತರಲೆಂದು ಹೋಗಿದ್ದಳು. ಬರುವಷ್ಟರಲ್ಲಿ ಬಾಲಕನ ತಂದೆ ತಿಪ್ಪೇಶ್ ಬಾಲಕನನ್ನು ಮನಬಂದೆಂತೆ ಹೊಡೆದಿದ್ದಾನೆ. ಮಗು ಮೂರ್ಚೆ ಹೋಗಿತ್ತು.

ಬಾಲಕನ ಬೆನ್ನು, ಪಕ್ಕೆಲುಬಿಗೆ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ತಕ್ಷಣ ತಾಯಿ ಮಗನನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕ ಸಾವನ್ನಪ್ಪಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತಿ ತಿಪ್ಪೇಶ್ ವಿರುದ್ಧ ಪತ್ನಿ ಗೌರಮ್ಮ ಭರಮಸಾಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗೌರಮ್ಮ ಹಾಗೂ ತಿಪ್ಪೇಶ್ ಕೆಲ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ತಿಪ್ಪೇಶ್ ತನ್ನ ತಾಯಿ ಮಾತು ಕೇಳಿ ಮಗನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular