ಕಾರವಾರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಸಮೀಪದ ಬೇರಂಕಿ ಗ್ರಾಮದ ಬಳಿ ಜೇನು ಹುಳುಗಳ ದಾಳಿಯಿಂದ ಕೃಷಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ.
ಮಂಜುನಾಥ ಗಣಪ ಅಂಬಿಗ(53) ಮೃತಪಟ್ಟವರು. ಬೇರಂಕಿ ಗ್ರಾಮಕ್ಕೆ ಕೃಷಿ ಕೆಲಸಕ್ಕೆ ಹೋಗುತ್ತಿದ್ದ ಮಂಜುನಾಥ ಅವರ ಮೇಲೆ ಜೇನು ಹುಳಗಳು ದಾಳಿ ನಡೆಸಿವೆ. ಅನಿಲಗೋಡದ ಮಂಜುನಾಥ ಅವರೊಂದಿಗೆ ಇತರರು ಕೆಲಸಕ್ಕೆ ಹೋಗುತ್ತಿದ್ದ ವೇಳೆ ಏಕಾಏಕಿ ಜೇನು ಹುಳುಗಳು ದಾಳಿ ಮಾಡಿವೆ. ಈ ವೇಳೆ ಓಡಲಾಗದೆ ಅಲ್ಲಿಯೇ ಬಿದ್ದ ಮಂಜುನಾಥ ಅವರ ತಲೆ ಮತ್ತು ಮೈ ಕೈಗೆ ಜೇನು ಹುಳುಗಳು ಕಡಿದಿವೆ. ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ.

