HomeKarnatakaBIG NEWS: ಲೋಕಾಯುಕ್ತ ಅಧಿಕಾರಿ ಎಂದು PWD ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್; ಆರೋಪಿ ಅರೆಸ್ಟ್, ಇನ್ನೋರ್ವ...

BIG NEWS: ಲೋಕಾಯುಕ್ತ ಅಧಿಕಾರಿ ಎಂದು PWD ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್; ಆರೋಪಿ ಅರೆಸ್ಟ್, ಇನ್ನೋರ್ವ ಪರಾರಿ

ಬೆಂಗಳೂರು: ಲೋಕಾಯುಕ್ತ ಅಧಿಕಾರಿ ಎಂದು ನಕಲಿ ಗುರುತು ತೋರಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಮೂಲದ ಸಂತೋಷ್ ಕೊಪ್ಪದ್ ಬಂಧಿತ ಆರೋಪಿ. ಈತನ ಸಹಚರ ಬೈಲಹೊಂಗಲದ ದೇಶನೂರು ನಿವಾಸಿ ವಿಕಾಶ್ ಪಾಟೀಲ್ ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಬ್ಬರು ಆರೋಪಿಗಳು ತಾವು ಲೋಕಾಯುಕ್ತ ಅಧಿಕಾರಿಗಳು ಎಂದು ಹೇಳಿಕೊಂಡು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಬ್ಲ್ಯಾಕ್ ಮೇಲ್ ಮಡುತ್ತಿದ್ದರು. ದೂರವಾಣಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಪೊಲೀಸರಿಗೆ ದೂರು ನೀಡಿದ್ದ ಅಧಿಕಾರಿಗಳು ಬಳಿಕ ಆರೋಪಿಗಳಿಗೆ ಲಂಚದ ಹಣ ನೀಡುವುದಾಗಿ ಹೇಳಿ ನಂಬಿಸಿದ್ದರು.

ಹಣ ಪಡೆಯಲು ಬಂದಾಗ ಆರೋಪಿ ಸಂತೋಷ್ ಕೊಪ್ಪದ್ ಎಂಬಾತನನ್ನು ಪೊಲೀಸರು ಬಧಿಸಿದ್ದಾರೆ. ಇನ್ನೋರ್ವ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular