HomeKarnatakaBIG NEWS: ನಕಲಿ ಮರಣ ಪ್ರಮಾಣಪತ್ರ, ವಂಶವೃಕ್ಷ ಸೃಷ್ಟಿ; 3 ಅಧಿಕಾರಿಗಳು ಸಸ್ಪೆಂಡ್

BIG NEWS: ನಕಲಿ ಮರಣ ಪ್ರಮಾಣಪತ್ರ, ವಂಶವೃಕ್ಷ ಸೃಷ್ಟಿ; 3 ಅಧಿಕಾರಿಗಳು ಸಸ್ಪೆಂಡ್

ಮೈಸೂರು: ನಕಲಿ ಮರಣ ಪ್ರಮಾಣ ಪತ್ರ ಮಾಡಿ, ವಂಶವೃಕ್ಷ ಸೃಷ್ಟಿಸಿ ಅಕ್ರಮವೆಸಗುತ್ತಿದ್ದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಬೇನಾಮಿ ವ್ಯಕ್ತಿಗಳಿಗೆ ಪೌತಿಖಾತೆ ಮಾಡಿಕೊಟ್ಟಿದ್ದ ಆರೋಪದಡಿ ಮೂವರು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಟಿ.ನರಸಿಪುರ ತಾಲೂಕು ಕಚೇರಿ ಹಿಂದಿನ ರಾಜಸ್ವ ನಿರೀಕ್ಷಕ ಹಾಲಿ ಆಹಾರ ನಿರೀಕ್ಷಕ ದೇವಣ್ಣ ಕೆ, ಟಿ.ನರಸೀಪುರ ಭೈರಾಪುರ ಹಿಂದಿನ ಗ್ರಾಮ ಆಡಳಿತ ಅಧಿಕಾರಿ ಹಾಲಿ ಜಯಪುರ ಮೃತ್ತ ಗ್ರಾಮ ಆಡಳಿತಾಧಿಕರಿಯಾಗಿರುವ ಪ್ರದೀಪ್ ಸಿಂಗ್, ಟಿ.ನರಸಿಪುರ ತಾಲೂಕು ಕಚೇರಿ ಗ್ರಾಮ ಆಡಳಿತ ಅಧಿಕಾರಿ ಭೂಮಿಕೇಂದ್ರದ ಹಂಸಲೇಖ ಅಮಾನತುಗೊಂಡವರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಿರುಮಲಕೊಡಲು ಗ್ರಾಮದ ಸರ್ವೆ ನಂ.55/2ರಲ್ಲಿ 22 ಗುಂಟೆ ಹಾಗೂ 55/6 ರಲ್ಲಿ 8 ಗುಂಟೆ ಜಮೀನಿಗೆ ಅಕ್ರಮವಾಗಿ ಪೌತಿಖಾತೆ ಮಾಡಿಸಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular