HomeIndiaExclusive | ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸೋದರಳಿಯ; ಕರಾಚಿಯಲ್ಲಿಯೇ...

Exclusive | ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸೋದರಳಿಯ; ಕರಾಚಿಯಲ್ಲಿಯೇ ವಾಸ್ತವ್ಯ ಎಂದು ಮಾಹಿತಿ

ಬಹು ದಿನಗಳ ಬಳಿಕ ಮತ್ತೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ವಿಚಾರ ಮುನ್ನೆಲೆಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳದ (NIA) ವಿಚಾರಣೆ ವೇಳೆ ದಾವೂದ್ ಸೋದರಳಿಯ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆತ ಪಾಕಿಸ್ತಾನದ ಆಶ್ರಯದಲ್ಲೇ ಇದ್ದು ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ.

ದಾವೂದ್ ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಪುತ್ರ ಆಲಿ ಶಾ ಇಬ್ರಾಹಿಂ ಪಾರ್ಕರ್ ತನಿಖಾಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದು, ಕರಾಚಿಯ ಡಿಫೆನ್ಸ್ ಕಾಲೋನಿಯಲ್ಲಿ ದಾವೂದ್ ನಿವಾಸವಿದೆ ಎಂದು ಹೇಳಿದ್ದಾನೆ. ಅಲ್ಲದೆ ಮತ್ತೊಂದು ಮದುವೆಯನ್ನು ಸಹ ದಾವೂದ್ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾವೂದ್ ಇಬ್ರಾಹಿಂ ತನ್ನ ಮೊದಲ ಪತ್ನಿ ಮೆಹಜ್ಬೀನ್ ಅವರಿಂದ ವಿಚ್ಛೇದನ ಪಡೆಯದೆ ಪಠಾಣ್ ಮೂಲದ ಮಹಿಳೆ ಜೊತೆ ಎರಡನೇ ವಿವಾಹವಾಗಿದ್ದು, ಮೊದಲ ಪತ್ನಿ ಈಗಲೂ ಸಹ ಮುಂಬೈನಲ್ಲಿರುವ ಸಂಬಂಧಿಕರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಕರಾಚಿಯ ಡಿಫೆನ್ಸ್ ಕಾಲೋನಿಯಲ್ಲಿರುವ ಅಬ್ದುಲ್ ಗಾಜಿ ಬಾಬಾ ದರ್ಗಾ ಬಳಿ ದಾವೂದ್ ಇಬ್ರಾಹಿಂ ನಿವಾಸವಿದ್ದು, ಆಲಿ ಶಾ ಇಬ್ರಾಹಿಂ ಪಾರ್ಕರ್ ಕಳೆದ ವರ್ಷ ದುಬೈನಲ್ಲಿ ದಾವೂದ್ ಮೊದಲ ಪತ್ನಿಯನ್ನು ಭೇಟಿಯಾಗಿದ್ದ ಎಂದು ಮೂಲಗಳು ತಿಳಿಸಿವೆ.

For Latest News Updates, Join Our Whatsapp Community🚩
RELATED ARTICLES

Most Popular