HomeLatest Newsಸ್ವಯಂ ಸೇವಕರಾಗಿ ನಾಗರಿಕ ರಕ್ಷಣಾಗೆ ನೋಂದಾಯಿಸಿಕೊಳ್ಳಲು ಮಾಜಿ ಸೈನಿಕರಿಗೆ ಆಹ್ವಾನ

ಸ್ವಯಂ ಸೇವಕರಾಗಿ ನಾಗರಿಕ ರಕ್ಷಣಾಗೆ ನೋಂದಾಯಿಸಿಕೊಳ್ಳಲು ಮಾಜಿ ಸೈನಿಕರಿಗೆ ಆಹ್ವಾನ

ಶಿವಮೊಗ್ಗ : ಡೈರೆಕ್ಟರ್ ಜನರಲ್ (ಅಗ್ನಿ ಶಾಮಕ, ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ) ಇವರು ಹೆಚ್ಚಿನ ಸಂಖ್ಯೆಯ ಮಾಜಿ ಸೈನಿಕರನ್ನು ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್)ಗೆ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಆನ್‌ಲೈನ್ ಪೋರ್ಟಲ್ www.civildefencewarriors.gov.in (CD warriors) ರಲ್ಲಿ ಅರ್ಜಿ ಸಲ್ಲಿಸುವುದು. ನೋಂದಾಯಿಸಿಕೊAಡ ಸೈನಿಕರು ಅದಷ್ಟು ಶೀಘ್ರವಾಗಿ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿಯಲ್ಲಿ ತಮ್ಮ ಹೆಸರನ್ನು ದಾಖಲಿಸಬೇಕೆಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಉಮೇಶ್ ಶರ್ಮ ಎಡಿಜಿ, ಸಿವಿಲ್ ಡಿಫೆನ್ಸ್, ದೂ.ಸಂ.: 011-20863645 ಇವರನ್ನು ಸಂಪರ್ಕಿಸುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular