HomeAstroಪ್ರತಿ ದೀಪಕ್ಕೆ ಎರಡು ಬತ್ತಿ ಹಾಕಿಯೇ ಬೆಳಗಿಸಬೇಕು, ಯಾಕೆ ಗೊತ್ತಾ....?

ಪ್ರತಿ ದೀಪಕ್ಕೆ ಎರಡು ಬತ್ತಿ ಹಾಕಿಯೇ ಬೆಳಗಿಸಬೇಕು, ಯಾಕೆ ಗೊತ್ತಾ….?

ದೀಪಗಳ ಹಬ್ಬ ದೀಪಾವಳಿ. ಕತ್ತಲೆಯನ್ನು ಹೊಡೆದೋಡಿಸಿ, ಬೆಳಕನ್ನು ಚೆಲ್ಲುವ ದೀಪಗಳು ನೋಡಲು ಚೆಂದ. ಜ್ಞಾನದ ಸಂಕೇತವಾದ ದೀಪಗಳನ್ನು ಬೆಳಗಿಸುವಾಗ ಪ್ರತಿ ದೀಪಕ್ಕೂ ಎರಡು ಬತ್ತಿಗಳನ್ನು ಹಾಕಬೇಕು ಎಂಬ ನಿಯಮ ಇದೆ. ಇದಕ್ಕೊಂದು ವಿಶೇಷ ಕಾರಣವೂ ಇದೆ.

ದೇವರ ಮನೆಗೆ ದೀಪದ ಬೆಳಕೇ ಶೋಭೆ. ಸಾಮಾನ್ಯವಾಗಿ ಎರಡು ದೀಪಗಳನ್ನು ದೇವರ ಮುಂದೆ ಬೆಳಗಿಸಲಾಗುತ್ತದೆ. ಪ್ರತಿ ದೀಪಕ್ಕೂ ಎರಡು ಬತ್ತಿಯ ಕಾರಣ ಇಷ್ಟೇ, ಎರಡು ದೀಪ ಅಥವಾ ಎರಡು ಬತ್ತಿ ಪತಿ ಪತ್ನಿಯ ಸ್ವರೂಪ.

ಪತಿ ಪತ್ನಿ ಜೊತೆಗಿದ್ದರೆ ಮನೆ ಎಂಬ ಭಾವನೆ ಮೂಡುತ್ತದೆ. ಇಲ್ಲಿ, ಗಂಡು ಹೆಣ್ಣು ಪ್ರತ್ಯೇಕ ವಾಸ ಮಾಡುತ್ತಿದ್ದರೆ ಅದು ಮನೆಯಲ್ಲ, ಕೇವಲ ರೂಮ್ ಅಷ್ಟೇ. ಹಾಗಾಗಿ ಮನೆಯ ಸಂಪೂರ್ಣ ಶ್ರೇಯೋಭಿವೃದ್ದಿಯ ಹೊಣೆ ಪತಿ ಪತ್ನಿಯದ್ದೇ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವರ ಮುಂದೆ ಬೆಳಗೋ ಎರಡು ದೀಪಗಳು, ದೀಪದಲ್ಲಿ ಉರಿಯುವ ಎರಡು ಬತ್ತಿಗಳು ಕುಟುಂಬಕ್ಕಾಗಿ ತ್ಯಾಗ, ಸೇವೆಯನ್ನು ಪ್ರತಿನಿಧಿಸುತ್ತದೆ. ದೀಪದ ಬೆಳಕು ಅವರಿಬ್ಬರ ಪ್ರೀತಿಯ ಸಂಕೇತ. ಬೆಳಗುವ ದೀಪ ಹೇಗೆ ನೋಡಲು ಸುಂದರವೊ, ಹಾಗೆ ಪತಿ ಪತ್ನಿಯರ ಪ್ರೀತಿ ಬಾಂಧವ್ಯ ಕುಟುಂಬದ ಶ್ರೇಯಸ್ಸಿಗೆ ಕಾರಣ. ದೇವರಲ್ಲಿ ತಮ್ಮ ಈ ಬಾಂಧವ್ಯ ಗಟ್ಟಿಯಾಗಿರಲಿ, ಕುಟುಂಬ ವೃದ್ದಿಯಾಗಲಿ ಎಂಬ ಭಾವವೇ ದೀಪ ಬೆಳಗುವುದರ ಹಿಂದೆ ಇದೆ.

For Latest News Updates, Join Our Whatsapp Community🚩
RELATED ARTICLES

Most Popular