HomeLatest Newsಸಂಜೆ ಸ್ನ್ಯಾಕ್ಸ್‌ಗೆ ಹೇಳಿಮಾಡಿಸಿದ ಟೇಸ್ಟಿ ಖಾದ್ಯ: ಮನೆಯಲ್ಲೇ ಮಾಡಿ ಖಾರ-ಖಾರ ಡ್ರೈ ಚಿಲ್ಲಿ ಪನ್ನೀರ್

ಸಂಜೆ ಸ್ನ್ಯಾಕ್ಸ್‌ಗೆ ಹೇಳಿಮಾಡಿಸಿದ ಟೇಸ್ಟಿ ಖಾದ್ಯ: ಮನೆಯಲ್ಲೇ ಮಾಡಿ ಖಾರ-ಖಾರ ಡ್ರೈ ಚಿಲ್ಲಿ ಪನ್ನೀರ್

ಸಂಜೆ ವೇಳೆ ಸವಿಯಲು ಅಥವಾ ದಿಢೀರ್ ಆಗಿ ಏನಾದರೂ ರುಚಿಕರವಾದ ತಿನಿಸು ಬೇಕೆನಿಸಿದಾಗ ಮನೆಯಲ್ಲೇ ಸುಲಭವಾಗಿ ಡ್ರೈ ಚಿಲ್ಲಿ ಪನ್ನೀರ್ ತಯಾರಿಸಬಹುದು. ರೆಸ್ಟೋರೆಂಟ್ ಶೈಲಿಯ ಈ ಖಾದ್ಯವನ್ನು ಯಾವುದೇ ಶ್ರಮವಿಲ್ಲದೆ ಕೇವಲ 20 ನಿಮಿಷಗಳಲ್ಲಿ ಸಿದ್ಧಪಡಿಸಬಹುದು.

ಅಗತ್ಯವಿರುವ ಸಾಮಗ್ರಿಗಳು:

  • ಪನ್ನೀರ್ – 1 ಕಪ್ (ಕ್ಯೂಬ್ ಆಕಾರದಲ್ಲಿ ಹೆಚ್ಚಿದ್ದು)

    📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
    APP ತೆರೆಯಿರಿ
  • ಈರುಳ್ಳಿ – 1 (ದೊಡ್ಡದಾಗಿ ಹೆಚ್ಚಿದ್ದು)

  • ಕ್ಯಾಪ್ಸಿಕಂ – 1 (ದೊಡ್ಡದಾಗಿ ಹೆಚ್ಚಿದ್ದು)

  • ಹಸಿಮೆಣಸಿನಕಾಯಿ – 2 ರಿಂದ 3 (ದೊಡ್ಡದಾಗಿ ಹೆಚ್ಚಿದ್ದು)

  • ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 2 ಚಮಚ

  • ಸಣ್ಣಗೆ ಹೆಚ್ಚಿದ ಶುಂಠಿ – 1 ಚಮಚ

  • ಸೋಯಾ ಸಾಸ್ – 1 ಚಮಚ

  • ಟೊಮೆಟೊ ಸಾಸ್ – 1 ರಿಂದ 2 ಚಮಚ

  • ವಿನೆಗರ್ – ಅರ್ಧ ಚಮಚ

  • ಇತರೆ: ಸಪ್ರಿಂಗ್ ಆನಿಯನ್, ಎಣ್ಣೆ, ಉಪ್ಪು, ಕಪ್ಪು ಮೆಣಸಿನ ಪುಡಿ ಮತ್ತು ಚಿಟಿಕೆ ಸಕ್ಕರೆ

ತಯಾರಿಸುವ ವಿಧಾನ: ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ ಪನ್ನೀರ್ ತುಂಡುಗಳನ್ನು ಹಗುರವಾಗಿ ಫ್ರೈ ಮಾಡಿ ಪ್ರತ್ಯೇಕವಾಗಿ ಎತ್ತಿಟ್ಟುಕೊಳ್ಳಿ. ಅದೇ ಬಾಣಲೆಗೆ ಮತ್ತಷ್ಟು ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ ಬಾಡಿಸಿ. ನಂತರ ಈರುಳ್ಳಿ ಹಾಕಿ ಹೆಚ್ಚಿನ ಉರಿಯಲ್ಲಿ ತಿಳಿ ಬಣ್ಣ ಬರುವವರೆಗೆ ಹುರಿಯಿರಿ.

ಬಳಿಕ ಕ್ಯಾಪ್ಸಿಕಂ ಮತ್ತು ಹಸಿಮೆಣಸಿನಕಾಯಿ ಜೊತೆಗೆ ಸ್ವಲ್ಪ ಉಪ್ಪು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ. ಈಗ ಸೋಯಾ ಸಾಸ್, ಟೊಮೆಟೊ ಸಾಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು, ಕಪ್ಪು ಮೆಣಸಿನ ಪುಡಿ ಮತ್ತು ಒಂದು ಚಿಟಿಕೆ ಸಕ್ಕರೆ ಸೇರಿಸಿ ಡ್ರೈ ಹದಕ್ಕೆ ಬರುವವರೆಗೆ ತಿರುವಿ.

ಕೊನೆಯಲ್ಲಿ ಫ್ರೈ ಮಾಡಿಟ್ಟ ಪನ್ನೀರ್ ತುಂಡುಗಳು ಹಾಗೂ ವಿನೆಗರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಮೇಲೆ ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಉದುರಿಸಿದರೆ ಬಿಸಿಬಿಸಿಯಾದ ಡ್ರೈ ಚಿಲ್ಲಿ ಪನ್ನೀರ್ ಸವಿಯಲು ಸಿದ್ಧ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular