
ಕಾವೇರಿ ನದಿ ನೀರಿನ ಹಂಚಿಕೆಯ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಢೋಂಗಿತನ ಮತ್ತೊಮ್ಮೆ ಬಯಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕದ ಪರ ಸಮರ್ಥವಾಗಿ ವಾದ ಮಂಡಿಸುವಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಮಿತ್ರಪಕ್ಷ ಡಿಎಂಕೆಯ ಸರ್ಕಾರದ ಮುಂದೆ ಮಂಡಿಯೂರಿ ಕುಳಿತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ.
ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಬಿಡಲು ಸಿದ್ದರಾಮಯ್ಯರವರ ಸರ್ಕಾರ ಒಪ್ಪಿಕೊಂಡು ಬಂದಿದೆ. ಕನ್ನಡಿಗರು ನೀರಿಲ್ಲದೆ ಪರಿತಪಿಸುತ್ತಿದ್ದರೂ ಪರವಾಗಿಲ್ಲ, ಕಾಂಗ್ರೆಸ್ಸಿಗೆ I.N.D.I.Alliance ಮೈತ್ರಿಕೂಟ ಉಳಿದುಕೊಳ್ಳಬೇಕಿದೆ. “ನಾನು ಸತ್ತಂತೆ ಮಾಡುವೆ, ನೀನು ಅತ್ತಂತೆ ಮಾಡು” ಎನ್ನುವ ಧೋರಣೆಯ ಮೂಲಕ ಕಾಂಗ್ರೆಸ್ ಸರ್ಕಾರ ಕನ್ನಡನಾಡಿಗೆ ದ್ರೋಹ ಬಗೆದಿದೆ. ಕೊಡಗಿನ ಕಾವೇರಿಯ ಕೊನೆ ಹನಿ ಕೂಡ ತಮಿಳುನಾಡು ಪಾಲಾಗುವುದು ನಿಶ್ಚಿತ ಎಂದು ಬಿಜೆಪಿ ವಾಗ್ಧಾಳಿ ನಡೆಸಿದೆ.
ಕಾವೇರಿ ನದಿ ನೀರಿನ ಹಂಚಿಕೆಯ ವಿಚಾರದಲ್ಲಿ @INCKarnataka ಸರ್ಕಾರದ ಢೋಂಗಿತನ ಮತ್ತೊಮ್ಮೆ ಬಯಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕದ ಪರ ಸಮರ್ಥವಾಗಿ ವಾದ ಮಂಡಿಸುವಲ್ಲಿ @siddaramaiah ಅವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಮಿತ್ರಪಕ್ಷ ಡಿಎಂಕೆಯ ಸರ್ಕಾರದ ಮುಂದೆ ಮಂಡಿಯೂರಿ ಕುಳಿತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ.… pic.twitter.com/XcvvNxSwt2
— BJP Karnataka (@BJP4Karnataka) September 21, 2023

