HomeKarnatakaBIG NEWS: ಹಂದಿ ತಪ್ಪಿಸಲು ಹೋಗಿ ದುರಂತ; ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದು ಹೊತ್ತಿ ಉರಿದ ಎಥೆನಾಲ್...

BIG NEWS: ಹಂದಿ ತಪ್ಪಿಸಲು ಹೋಗಿ ದುರಂತ; ರಸ್ತೆಯಲ್ಲೇ ಪಲ್ಟಿಯಾಗಿ ಬಿದ್ದು ಹೊತ್ತಿ ಉರಿದ ಎಥೆನಾಲ್ ಟ್ಯಾಂಕರ್

ಕಲಬುರ್ಗಿ: ರಸ್ತೆಗೆ ಅಡ್ಡಲಾಗಿ ಬಂದ ಹಂದಿ ರಕ್ಷಿಸಲು ಹೋಗಿ ಅವಘಡ ಸಂಭವಿಸಿದೆ. ಎಥೆನಾಲ್ ಟ್ಯಾಂಕರ್ ಒಂದು ಪಲ್ಟಿಯಾಗಿ ಬಿದ್ದು ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಘಟನೆ ಕಲಬುರ್ಗಿಯ ಮಲ್ಲಾಬಾದ್ ಬಳಿ ನಡೆದಿದೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ್ ಬಳಿ ಈ ಘಟನೆ ನಡೆದಿದೆ. ಎಥೆನಾಲ್ ಟ್ಯಾಂಕರ್ ಗೆ ರಸ್ತೆಗೆ ಅಡ್ಡಲಾಗಿ ಹಂದಿಯೊಂದು ಬಂದಿದ್ದು, ಅದನ್ನು ರಕ್ಷಿಸಲು ಹೋಗಿ ಟ್ಯಾಂಕರ್, ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಎಥೆನಾಲ್ ಟ್ಯಾಂಕರ್ ರಸ್ತೆಯಲ್ಲಿಯೇ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಬಚಾವ್ ಆಗಿದ್ದಾರೆ. ಎಥೆನಾಲ್ ಟ್ಯಾಂಕರ್ ಮುಂಬೈನಿಂದ ತೆಲಂಗಾಣಕ್ಕೆ ತೆರಳುತ್ತಿತ್ತು. ಅಫಜಲಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular