HomeKarnatakaಟ್ಯಾಬ್ಲೋಗೆ 1 ಲಕ್ಷ ಬಹುಮಾನ ನೀಡಿದ ಈಶ್ವರ ಖಂಡ್ರೆಗೆ ಕೃತಜ್ಞತೆ ಸಮರ್ಪಣೆ ಅಸ್ಮಿತೆ-ಸ್ತ್ರೀಶಕ್ತಿಯ ಅನಾವರಣ...

ಟ್ಯಾಬ್ಲೋಗೆ 1 ಲಕ್ಷ ಬಹುಮಾನ ನೀಡಿದ ಈಶ್ವರ ಖಂಡ್ರೆಗೆ ಕೃತಜ್ಞತೆ ಸಮರ್ಪಣೆ ಅಸ್ಮಿತೆ-ಸ್ತ್ರೀಶಕ್ತಿಯ ಅನಾವರಣ ಟ್ಯಾಬ್ಲೋ ವೀಕ್ಷಿಸಿದ ಈಶ್ವರ ಖಂಡ್ರೆ

ಮಂಡ್ಯ ದಸರಾ ಜಂಬೂಸವಾರಿಯ ಅಸ್ಮಿತೆ

ಮಂಡ್ಯ-ದಸರಾ ಜಂಬೂಸವಾರಿಯಲ್ಲಿ ಜನಮೆಚ್ಚುಗೆ ಜೊತೆಗೆ ಪ್ರಥಮ ಬಹುಮಾನ ಪಡೆದಿರುವ ಮಂಡ್ಯ ಜಿಲ್ಲಾ ಪಂಚಾಯತ್ ನ ‘ಅಸ್ಮಿತೆ – ಸ್ತ್ರೀ ಶಕ್ತಿಯ ಅನಾವರಣ’ ಸ್ತಬ್ಧಚಿತ್ರ (ಟ್ಯಾಬ್ಲೋ)ವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಳಿಗೆ ಉದ್ಘಾಟಿಸಿ, ಬೆಂಗಳೂರಿಗೆ ಮರಳುವ ಮಾರ್ಗದಲ್ಲಿ ಬುಧವಾರ ರಾತ್ರಿ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ತಬ್ಧಚಿತ್ರವನ್ನು ವೀಕ್ಷಿಸಿದರು.

ಮಾತೃತ್ವದ ಮೌಲ್ಯ ಸಾರುವ ಹಾಲುಣಿಸುತ್ತಿರುವ ತಾಯಿಯ ಬೃಹತ್ ಪುತ್ಥಳಿಯಿರುವ ಈ ಸ್ತಬ್ಧಚಿತ್ರ, ‘ಶಿಶುಸಂಜೀವಿನಿ’ (ಎದೆ ಹಾಲಿನ ಸಂಗ್ರಹಣಾ ಕೇಂದ್ರ) ಪರಿಕಲ್ಪನೆಯನ್ನು ಪ್ರಚುರಪಡಿಸುವುದರ ಜೊತೆಗೆ ದುಡಿಯುವ ತಾಯಂದಿರ ಮಕ್ಕಳ ಪೋಷಣೆಗಾಗಿ ನಿರ್ಮಿಸಲಾದ ‘ವಾತ್ಸಲ್ಯ ಕೇಂದ್ರ’ದ ಮಾಹಿತಿಯನ್ನೂ ಒಳಗೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ತ್ರೀ ಶಕ್ತಿಯ ಅನಾವರಣದ ಮಹತ್ವ

ಆಧುನಿಕ ಯುಗದಲ್ಲಿ ಮಹಿಳೆಯರಿಗೂ ಅಪರಿಮಿತ ಅವಕಾಶಗಳು ಲಭಿಸುತ್ತಿದ್ದು, ಮೌಢ್ಯ, ಸಾಮಾಜಿಕ ಕಟ್ಟುಪಾಡುಗಳನ್ನು ಮೆಟ್ಟಿ ಮೇಲೇರುವ ಛಲವಿದ್ದರೆ ಮಹಿಳೆ ಎಷ್ಟು ಎತ್ತರಕ್ಕಾದರೂ ಏರಬಹುದು ಎಂಬ ಸಂದೇಶದ ಅಭಿವ್ಯಕ್ತಿಯನ್ನು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಲ್ಲಿ ಶಿಶು ಸಂಜೀವಿನಿ ಯೋಜನೆಯನ್ನು ಮಂಡ್ಯದಲ್ಲಿ ಕಳೆದ ವರ್ಷ ಅನುಷ್ಠಾನ ಮಾದಿರುವುದನ್ನು ಶ್ಲಾಘಿಸಿದ ಈಶ್ವರ ಖಂಡ್ರೆ, ಇಂತಹ ಮಹತ್ವಕಾಂಕ್ಷಿ ಯೋಜನೆಗಳು ಇತರೆ ಜಿಲ್ಲೆಗಳಿಗೂ ಮಾದರಿಯಾಗಬೇಕು ಎಂದರು.

ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಡ್ರೋನ್ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ಅಳವಡಿಸಿಕೊಂಡಿರುವುದನ್ನೂ ಈ ಸ್ತಬ್ಧಚಿತ್ರದಲ್ಲಿ ಬಿಂಬಿಸಲಾಗಿದೆ. ಅಕ್ಕ ಕೆಫೆ, ಹೈನುಗಾರಿಕೆಯೊಂದಿಗೆ ಮಹಿಳೆಯರು ಸ್ವಾವಲಂಬಿಗಳಾಗಲು ಪ್ರೇರಣೆ ನೀಡುವಂತಿದೆ ಎಂದರು.

2025ರ ಚೊಚ್ಚಲ ಅಂಧ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದ ಭಾರತೀಯ ತಂಡದ ಆಟಗಾರರ ಪುತ್ಥಳಿಯ ಜೊತೆಗೆ ಮಹಿಳೆಯರ ಋತುಸ್ರಾವ ನೈರ್ಮಲ್ಯಕ್ಕಾಗಿ 35,000ಕ್ಕೂ ಹೆಚ್ಚು ಮುಟ್ಟಿನ ಕಪ್‌ ಗಳನ್ನು ಉಚಿತವಾಗಿ ವಿತರಿಸಿರುವ ಅಂಶವನ್ನೂ ಬಿಂಬಿಸುವ ಈ ಸ್ತಬ್ಧಚಿತ್ರ ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ನಿತ್ಯದ ಪ್ರದರ್ಶನ ಮತ್ತು ಗಮನಜಾರಿತಾ

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ, ಸ್ತಬ್ಧಚಿತ್ರವನ್ನು ದಸರಾ ಜಂಬೂಸವಾರಿಯ ಬಳಿಕ, ಮಂಡ್ಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ನಿತ್ಯ ಸಾವಿರಾರು ಜನರು ವಿಶೇಷವಾಗಿ ಮಹಿಳೆಯರು ಮಕ್ಕಳು ವೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದರು.

ವಿಚಾರಪೂರ್ಣ, ಪ್ರೇರಣಾದಾಯಕವಾದ ಸ್ತಬ್ಧಚಿತ್ರದ ಪರಿಕಲ್ಪನೆಯನ್ನು ಶ್ಲಾಘಿಸಿ, ವೈಯಕ್ತಿಕವಾಗಿ 1 ಲಕ್ಷ ರೂ. ನಗದು ಬಹುಮಾನವನ್ನು ನೀಡಿರುವ ಈಶ್ವರ ಖಂಡ್ರೆ ಅವರಿಗೆ ಮತ್ತು ಮಂಡ್ಯ ಜನರ ವೀಕ್ಷಣೆಗೆ ಅವಕಾಶ ಕಲ್ಪಿಸಲು ಶ್ರಮಿಸಿದ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರಿಗೆ ಸಿಇಓ ಕೃತಜ್ಞತೆ ಸಲ್ಲಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular