HomeAutoBIG NEWS: ಎಲೆಕ್ಟ್ರಿಕ್ ಬೈಕ್ ನಲ್ಲಿ ಬೆಂಕಿ ಅವಘಡ; ನಾಲ್ಕು ಬೈಕ್ ಗಳು ಬೆಂಕಿಗಾಹುತಿ

BIG NEWS: ಎಲೆಕ್ಟ್ರಿಕ್ ಬೈಕ್ ನಲ್ಲಿ ಬೆಂಕಿ ಅವಘಡ; ನಾಲ್ಕು ಬೈಕ್ ಗಳು ಬೆಂಕಿಗಾಹುತಿ

ನೆಲಮಂಗಲ: ಎಲೆಕ್ಟ್ರಿಕ್ ಓಲೊ ಕಂಪನಿಯ ಬೈಕ್ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ನಾಲ್ಕು ಬೈಕ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ಶ್ರೀಕಾಂತ್ ಶರ್ಮಾ ಎಂಬುವವರಿಗೆ ಸೇರಿದ ಬೈಕ್ ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೈಕ್ ಗಳಿಗೆ ತಗುಲಿದ ಬೆಂಕಿ ನಂದಿಸಲು ಹೋಗಿ ಶ್ರೀಕಾಂತ್ ಶರ್ಮಾಗೂ ಗಾಯಗಳಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೋಡ ನೋಡುತ್ತಿದ್ದಂತೆಯೇ ಮೂರುವರೆ ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಗಳು ಬೆಂಕಿಗಾಹುತಿಯಾಗಿವೆ. ವಾರದ ಹಿಂದಷ್ಟೇ ಶ್ರೀಕಾಂತ್ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು.

ಇದ್ದಕ್ಕಿದ್ದಂತೆ ಮನೆ ಮುಂದೆ ಜೋರಾದ ಶಬ್ದ ಕೇಳುತ್ತಿದ್ದಂತೆ ಹೊರ ಬಂದು ನೋಡಿದಾಗ ಬೈಕ್ ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿತ್ತು. ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದ್ದಾರೆ. ಆದರೆ ಬೈಕಗಳು ಸುಟ್ಟು ಕರಕಲಾಗಿವೆ.

ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular