HomeKarnatakaBIG NEWS: ವಿದ್ಯುತ್ ಅವಘಡಕ್ಕೆ ಮತ್ತೊಂದು ಬಲಿ; ಕರೆಂಟ್ ಶಾಕ್ ಹೊಡೆದು ಯುವಕ ದುರ್ಮರಣ

BIG NEWS: ವಿದ್ಯುತ್ ಅವಘಡಕ್ಕೆ ಮತ್ತೊಂದು ಬಲಿ; ಕರೆಂಟ್ ಶಾಕ್ ಹೊಡೆದು ಯುವಕ ದುರ್ಮರಣ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಅವಘಡಕ್ಕೆ ಮತ್ತೊಂದು ಬಲಿಯಾಗಿದೆ. ಧರೆಗುರುಳಿದ್ದ ವಿದ್ಯುತ್ ಕಂಬ ತೆರವುಗೊಳಿಸುತ್ತಿದ್ದ ವೇಳೆ ಕ್ರೇನ್ ಆಪರೇಟರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

ನಿರ್ಮಾಣ ಹಂತದ ಕಾಮಗಾರಿ ವೇಳೆ ಡಿ.8ರಂದು ಬೃಹತ್ ವಿದ್ಯುತ್ ಕಂಬ ಕಟ್ಟಡದ ಸಮೇತ ಧರೆಗುರುಳಿ ಬಿದ್ದಿತ್ತು. ಈ ವಿದ್ಯುತ್ ಕಂಬವನ್ನು ತೆರವುಗೊಳಿಸಲು ಇಂದು ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ವಿದ್ಯುತ್ ಕಂಬದಲ್ಲಿದ್ದ ಬ್ಯಾಟರಿ ತೆರವು ಮಾಡುವ ವೇಳೆ ವೈರ್ ತಗುಲಿ ಕರೆಂಟ್ ಶಾಕ್ ಹೊಡೆದ ಪರಿಣಾಮ ಕ್ರೇನ್ ಆಪರೇಟರ್ ಮೃತಪಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈನ್ ಕುಮಾರ್ (20) ಮೃತ ಯುವಕ. ಅಧಿಕಾರಿಗಳು ಹಾಗೂ ಕಟ್ಟಡ ಮಾಲೀಕರ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular