HomeIndiaBig Update: ಪಶ್ಚಿಮ ಬಂಗಾಳ ಚುನಾವಣೆ: ಚುನಾವಣಾ ಆಯೋಗದ ಮಹತ್ವದ ತೀರ್ಮಾನ

Big Update: ಪಶ್ಚಿಮ ಬಂಗಾಳ ಚುನಾವಣೆ: ಚುನಾವಣಾ ಆಯೋಗದ ಮಹತ್ವದ ತೀರ್ಮಾನ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ 2026ರ ದಿನಾಂಕ ಇನ್ನೂ ಪ್ರಕಟವಾಗಬೇಕಿದೆ. 294 ಸದಸ್ಯ ಬಲದ ವಿಧಾನಸಭೆಗೆ ಏಪ್ರಿಲ್/ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ಮಾರ್ಚ್‌ನಲ್ಲಿ ವೇಳಾಪಟ್ಟಿ ಘೋಷಣೆ ಮಾಡುವ ನಿರೀಕ್ಷೆ ಇದೆ.

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹಿಂಸಚಾರ ಹೆಚ್ಚಾಗಿರುವ ಕಾರಣ ಚುನಾವಣಾ ಆಯೋಗ ಮಾರ್ಚ್ 1ರಿಂದಲೇ ರಾಜ್ಯದಲ್ಲಿ ಕೇಂದ್ರಿಯ ಪಡೆಗಳನ್ನು ಭದ್ರತೆಗೆ ನಿಯೋಜನೆ ಮಾಡಲಿದೆ. ಟಿಎಂಸಿ ಕಾರ್ಯಕರ್ತರ ಗೂಂಡಾಗಿರಿಗೆ ಕಡಿವಾಣ ಹಾಕಲು ಆಯೋಗ ಮುಂದಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಪಶ್ಚಿಮ ಬಂಗಾಳದ ಮತದಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮವಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳನ್ನು ಅವಧಿಗಿಂತ ಮುಂಚಿತವಾಗಿಯೇ ನಿಯೋಜಿಸಲಾಗುತ್ತದೆ. ಮಾರ್ಚ್‌ 1ರಿಂದಲೇ ಪಡೆಗಳು ರಾಜ್ಯದಲ್ಲಿ ಭದ್ರತೆ ಉಸ್ತುವಾರಿ ನೋಡಿಕೊಳ್ಳಲಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಟ್ಟು 470 ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್‌) ಪಡೆಗಳನ್ನು ಪಶ್ಚಿಮ ಬಂಗಾಳ ರಾಜ್ಯಕ್ಕೆ ನಿಯೋಜನೆ ಮಾಡುತ್ತದೆ. ಎರಡು ಹಂತದಲ್ಲಿ ಈ ನಿಯೋಜನೆ ನಡೆಯಲಿದ್ದು, ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ಭದ್ರತೆಯನ್ನು ಬಿಗಿಗೊಳಿಸಲಾಗುತ್ತದೆ.

ಮಾರ್ಚ್ 1ರಂದು 240 ಸಿಎಪಿಎಫ್‌ ತುಕಡಿಗಳು ರಾಜ್ಯಕ್ಕೆ ಆಗಮಿಸಲಿವೆ. ಮೊದಲ ಹಂತದಲ್ಲಿ ಈ ಪಡೆಗಳನ್ನು ನಿಯೋಜನೆ ಮಾಡಲಾಗುತ್ತದೆ. ಮಾರ್ಚ್ 10ರಂದು ಎರಡನೇ ಹಂತದ ಪಡೆ ರಾಜ್ಯಕ್ಕೆ ಆಗಮಿಸಲಿದೆ.

ಪಶ್ಚಿಮ ಬಂಗಾಳ ರಾಜ್ಯ ಚುನಾವಣಾ ಆಯೋಗ ಯಾವ ಯಾವ ಪ್ರದೇಶದಲ್ಲಿ ಕೇಂದ್ರಿಯ ಪಡೆ ನಿಯೋಜನೆ ಮಾಡಬೇಕು ಎಂದು ವಿವರ ನೀಡಿದೆ. ಇದಕ್ಕೆ ಕೇಂದ್ರ ಗೃಹ ಇಲಾಖೆ ಸಹ ಒಪ್ಪಿಗೆ ನೀಡಿದ್ದು, ಪಡೆಗಳನ್ನು ಅವಧಿಗೂ ಮೊದಲೇ ರಾಜ್ಯಕ್ಕೆ ಕಳಿಸಲಿದೆ.

ಸಾಮಾನ್ಯವಾಗಿ ಚುನಾವಣಾ ದಿನಾಂಕ ಘೋಷಣೆಯಾಗಿ, ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಭದ್ರತೆಗಾಗಿ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕೇಂದ್ರಿಯ ಪಡೆ ನಿಯೋಜನೆ ಮಾಡಲಾಗುತ್ತದೆ. ಆದರೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಘರ್ಷಣೆಗಳು ಹೆಚ್ಚಾಗಿ ನಡೆಯುವ ಕಾರಣ ಮೊದಲೇ ಪಡೆಯನ್ನು ನಿಯೋಜನೆ ಮಾಡಲಾಗುತ್ತಿದೆ.

ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ ರಾಜ್ಯದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿಯೋಜನೆಗೆ ರಾಜ್ಯದ ಆಡಳಿತ ಪಕ್ಷ ಟಿಎಂಸಿ ವಿರೋಧ ವ್ಯಕ್ತಪಡಿಸಿದೆ. ಆದರೆ ಚುನಾವಣಾ ಆಯೋಗ ವಿವಿಧ ರಾಜಕೀಯ ಪಕ್ಷಗಳ ಜೊತೆ ನಡೆಸಿದ ಸಭೆ ಬಳಿಕ ಈ ತೀರ್ಮಾನ ಕೈಗೊಂಡಿದೆ.

ಮಾರ್ಚ್‌ 1ರಿಂದಲೇ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ನಿಯೋಜನೆ ಮಾಡಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಡಿಜಿ-ಐಜಿಪಿಗೆ ಈಗಾಗಲೇ ಪತ್ರವನ್ನು ಬರೆದಿದೆ.

ಮೊದಲ ಹಂತದಲ್ಲಿ 110 ಸಿಆರ್‌ಪಿಎಫ್‌, 55 ಬಿಎಸ್‌ಎಫ್‌, 27 ಐಟಿಬಿಪಿ, 27 ಎಸ್‌ಎಸ್‌ಬಿ, 21 ಸಿಐಎಸ್‌ಎಫ್ ನಿಯೋಜನೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ರಾಜ್ಯದಲ್ಲಿ ಉಂಟಾದ ಪರಿಸ್ಥಿತಿ ಅವಲೋಕಿಸಿ, ಈ ತೀರ್ಮಾನ ಮಾಡಲಾಗಿದೆ.

2021ರಲ್ಲಿ ರಾಜ್ಯದದಲ್ಲಿ ಒಟ್ಟು 8 ಹಂತದಲ್ಲಿ ಮತದಾನ ನಡೆಸಲಾಗಿತ್ತು. 1,110 ಕೇಂದ್ರಿಯ ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಅದಕ್ಕೂ ಹೆಚ್ಚು ಪಡೆಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂಬ ಮಾಹಿತಿ ಇದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular