HomeLatest NewsBREAKING : ನಟ 'ದರ್ಶನ್' ಗೆ ಬಿಗ್ ರಿಲೀಫ್ : 'ಗನ್ ಲೈಸೆನ್ಸ್' ಅಮಾನತು ಆದೇಶಕ್ಕೆ...

BREAKING : ನಟ ‘ದರ್ಶನ್’ ಗೆ ಬಿಗ್ ರಿಲೀಫ್ : ‘ಗನ್ ಲೈಸೆನ್ಸ್’ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ!

ಬೆಂಗಳೂರು : ಸ್ಯಾಂಡಲ್‌’ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಕರ್ನಾಟಕ ಹೈಕೋರ್ಟ್’ ನಲ್ಲಿ ದೊಡ್ಡ ಮಟ್ಟದ ಕಾನೂನು ಜಯ ಸಿಕ್ಕಿದೆ. ಅವರ ಗನ್ ಲೈಸೆನ್ಸ್ (ಶಸ್ತ್ರಾಸ್ತ್ರ ಪರವಾನಗಿ) ಅಮಾನತುಗೊಳಿಸಿ ಪೊಲೀಸರು ಹೊರಡಿಸಿದ್ದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಹೌದು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅವರಿಗೆ ಜಾಮೀನು ಸಿಕ್ಕ ಬಳಿಕ, ಪೊಲೀಸರು ಅವರ ಗನ್ ಲೈಸೆನ್ಸ್ ಅನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಪೊಲೀಸರ ಅಮಾನತು ಆದೇಶಕ್ಕೆ ತಡೆ ನೀಡಿರುವ ಪೀಠವು ದರ್ಶನ್ ಅವರಿಗೆ ಸಮಾಧಾನ ತಂದಿದೆ.

ನಟ ದರ್ಶನ್ ಅವರು 2008 ರಿಂದಲೂ ಅಧಿಕೃತವಾಗಿ ಗನ್ ಲೈಸೆನ್ಸ್ ಹೊಂದಿದ್ದರು. ಯಾವುದೇ ಕಾನೂನುಬಾಹಿರ ಚಟುವಟಿಕೆಗೆ ಶಸ್ತ್ರಾಸ್ತ್ರ ಬಳಸದಿದ್ದರೂ ಅಮಾನತು ಮಾಡುವುದು ಸರಿಯಲ್ಲ ಎಂಬ ವಾದವನ್ನು ಆಲಿಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಜೈಲಿನಿಂದ ಬಿಡುಗಡೆಯಾದ ನಂತರ ದರ್ಶನ್ ಅವರ ಮೇಲೆ ಪೊಲೀಸರು ಕಠಿಣ ನಿಗಾ ಇಟ್ಟಿದ್ದರು. ಅದರ ಭಾಗವಾಗಿಯೇ ಶಸ್ತ್ರಾಸ್ತ್ರ ಪರವಾನಗಿ ರದ್ದುಪಡಿಸಲು ಮುಂದಾಗಿದ್ದರು. ಆದರೆ ಈಗ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯಿಂದಾಗಿ ದರ್ಶನ್ ಸದ್ಯಕ್ಕೆ ತಮ್ಮ ಗನ್ ಪರವಾನಗಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಯಾಂಡಲ್ ವುಡ್’ನ  ಮಿಂಚಿನ ತಾರೆ ದರ್ಶನ್ ಈಗ ಜೈಲಿನ ಕತ್ತಲ ಕೋಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ರಾಜಾತಿಥ್ಯದ ಆರೋಪ, ಜೈಲು ಬದಲಾವಣೆ ಮತ್ತು ಮನೆಯೂಟಕ್ಕಾಗಿ ನಡೆಸಿದ ಹೋರಾಟಗಳ ನಡುವೆ ದರ್ಶನ್ ಅವರ ಜೀವನ ಪೂರ್ತಿ ಬದಲಾಗಿದೆ. “ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಎ2 (A2) ಆರೋಪಿಯಾಗಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲುವರೆಗೆ ಪಯಣ ಬೆಳೆಸಿದ ನಟ ದರ್ಶನ್ ಸದ್ಯ ಬಿಡುಗಡೆ ಯಾವಾಗ ಎಂದು ಕಾದು ಕುಳಿತಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular