HomeEntertainmentʼದಿಲ್ ತೋ ಪಾಗಲ್ ಹೈʼ ಚಿತ್ರದ ಹಾಡಿಗೆ ತಾತನ ಡ್ಯಾನ್ಸ್: ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದ...

ʼದಿಲ್ ತೋ ಪಾಗಲ್ ಹೈʼ ಚಿತ್ರದ ಹಾಡಿಗೆ ತಾತನ ಡ್ಯಾನ್ಸ್: ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ವಿಡಿಯೋ

ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ. ಈ ಮಾತಿಗೆ ವಯಸ್ಸಾದ ಈ ವ್ಯಕ್ತಿ ಮಾಡಿದ ಡ್ಯಾನ್ಸ್ ವಿಡಿಯೋನೆ ಬೆಸ್ಟ್ ಎಕ್ಸಾಂಪಲ್. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಇರುವ ಹಿರಿಯ ವ್ಯಕ್ತಿಯ ಹೆಸರು ವಿಜಯ್ ಖರೋಟೆ.

ಈ ವೃದ್ಧ ಶಾರುಖ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅವರ ʼದಿಲ್ ತೋ ಪಾಗಲ್ ಹೈʼ ಚಿತ್ರದ ʼಕೋಯಿ ಲಡ್ಕಿ ಹೈʼ ಹಾಡಿಗೆ ನೃತ್ಯ ಮಾಡಿದ್ದಾರೆ. ಖರೋಟೆ ಅವರು ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ ಮತ್ತು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಇದೇ ರೀತಿಯ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ವಾರ ಪೋಸ್ಟ್ ಮಾಡಲಾದ ಈ ವೀಡಿಯೊ 6 ಮಿಲಿಯನ್ ವ್ಯೂವ್ಸ್ ಗಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಖರೋಟೆ ಅವರು ʼಕೋಯಿ ಲಡ್ಕಿ ಹೈʼ ಎಂದು ಹೇಳಿದಾಗ ಎಲ್ಲರೂ ನಗುತ್ತಿರುವುದು ಕಂಡು ಬರುತ್ತದೆ. ಈ ಹಾಡಿಗೆ ಡ್ಯಾನ್ಸ್‌ ಮಾಡುವಾಗ ಅವರ ಮುಖದ ಮೇಲೆ ಸುಂದರವಾದ ನಗು ಮೂಡುತ್ತದೆ.

ನೆಟ್ಟಿಗರು ವಿಜಯ್ ಖರೋಟೆ ಅವರ ನೃತ್ಯದ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ಅಜ್ಜ ನೀವು ಹೀಗೆ ನಗುತ್ತಿರಿ……. ನಿಮ್ಮನ್ನು ನೋಡಿದ ಮೇಲೆ ನನಗೆ ನನ್ನ ಅಜ್ಜನ ನೆನಪಾಯಿತು ಎಂಬ ಹೃದಯಸ್ಪರ್ಶಿ ಕಾಮೆಂಟ್ ಸಹ ಈ ಪೋಸ್ಟ್ ಗೆ ಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular