HomeLatest NewsSHOCKING : ಕಾಂಗೋದಲ್ಲಿ ಎಬೋಲಾ ವೈರಸ್ ಆತಂಕ ; 1,700ಕ್ಕೂ ಹೆಚ್ಚು ಮಂದಿ ಸಾವು

SHOCKING : ಕಾಂಗೋದಲ್ಲಿ ಎಬೋಲಾ ವೈರಸ್ ಆತಂಕ ; 1,700ಕ್ಕೂ ಹೆಚ್ಚು ಮಂದಿ ಸಾವು

ಕಿನ್ಶಾಸಾ : ಮಧ್ಯ ಆಫ್ರಿಕಾ ದೇಶವಾದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DRC) ದಲ್ಲಿ ಎಬೋಲಾ ವೈರಸ್ ಮತ್ತೆ ಭೀಕರವಾಗಿ ಹರಡುತ್ತಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.ಹೌದು. ಮಧ್ಯ ಆಫ್ರಿಕಾ ದೇಶವಾದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DRC) ದಲ್ಲಿ ಎಬೋಲಾ ವೈರಸ್ ಮತ್ತೆ ಭೀಕರವಾಗಿ ವ್ಯಾಪಿಸುತ್ತಿದ್ದು, ಮೇ 15ರಿಂದ ಇದುವರೆಗೆ 3,802 ಸೋಂಕು ಪ್ರಕರಣಗಳು ಮತ್ತು 1,700ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ.

‘ಬುಂಡಿಬುಗ್ಯೋ’ ತಳಿಯ ವೈರಸ್ಗೆ ಪರಿಣಾಮಕಾರಿ ಲಸಿಕೆ ಅಥವಾ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದು ಆತಂಕ ಹೆಚ್ಚಿಸಿದ್ದು, 100ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗೂ ಸೋಂಕು ತಗುಲಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.ಮೇ 15ರಿಂದ ಇಲ್ಲಿಯವರೆಗೆ 3,802 ಎಬೋಲಾ ಪ್ರಕರಣಗಳು ದಾಖಲಾಗಿದ್ದು, 1,700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಸರ್ಕಾರದ ಅಧಿಕೃತ ಅಂಕಿ-ಅಂಶಗಳು ತಿಳಿಸಿವೆ. ಆತಂಕಕಾರಿ ಸಂಗತಿಯೆಂದರೆ, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ 100ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿಗೂ ಈ ವೈರಸ್ ತಗುಲಿದೆ.

ಚಿಕಿತ್ಸೆ ಲಭ್ಯವಿಲ್ಲದ ಹೊಸ ವೈರಸ್ ರೂಪ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತುತ ಹರಡುತ್ತಿರುವ ಸೋಂಕು ‘ಬುಂಡಿಬುಗ್ಯೋ’ (Bundibugyo) ಎಂಬ ಎಬೋಲಾ ವೈರಸ್ ತಳಿಯೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವೈರಸ್ಗೆ ನಿರ್ದಿಷ್ಟ ಲಸಿಕೆ ಅಥವಾ ಪರಿಣಾಮಕಾರಿ ಚಿಕಿತ್ಸೆ ಇನ್ನೂ ಲಭ್ಯವಿಲ್ಲ. ಇದರಿಂದಾಗಿ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ.
ಸೋಂಕಿತರಲ್ಲಿ ತೀವ್ರ ಜ್ವರ, ರಕ್ತಸ್ರಾವ, ತೀವ್ರ ದೌರ್ಬಲ್ಯ ಸೇರಿದಂತೆ ಹಲವು ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ಆರೋಗ್ಯ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಕಾಂಗೋದಲ್ಲಿ ಸೋಂಕಿತರ ಚಿಕಿತ್ಸೆಯೂ ದೊಡ್ಡ ಸವಾಲಾಗಿದೆ. ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ತಡೆಯಲು ಅಂತರರಾಷ್ಟ್ರೀಯ ಆರೋಗ್ಯ ಸಂಸ್ಥೆಗಳ ನೆರವನ್ನು ಕಾಂಗೋ ಸರ್ಕಾರ ಕೋರಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular