HomeHealthಚಳಿಗಾಲದಲ್ಲಿ ಇವುಗಳನ್ನು ಸೇವಿಸುವುದರಿಂದ ಹೆಚ್ಚಾಗುತ್ತೆ ರೋಗ ನಿರೋಧಕ ಶಕ್ತಿ

ಚಳಿಗಾಲದಲ್ಲಿ ಇವುಗಳನ್ನು ಸೇವಿಸುವುದರಿಂದ ಹೆಚ್ಚಾಗುತ್ತೆ ರೋಗ ನಿರೋಧಕ ಶಕ್ತಿ

ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಜನರು ಬೇಗ ಕಾಯಿಲೆಗೆ ತುತ್ತಾಗುತ್ತಾರೆ. ಆದ ಕಾರಣ ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ಇದರಿಂದ ಕಾಯಿಲೆಗಳು ನಮ್ಮನ್ನು ಕಾಡುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇವುಗಳನ್ನು ಸೇವಿಸಿ.

*ಬಾದಾಮಿ : ಬಾದಾಮಿಯಲ್ಲಿ ಮೆಗ್ನೀಶಿಯಂ, ಪ್ರೋಟೀನ್, ಸತು, ವಿಟಮಿನ್ ಇ ಮುಂತಾದ ಪೋಷಕಾಂಶಗಳಿರುತ್ತದೆ. ಇದು ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ.

*ಶುಂಠಿ : ಶುಂಠಿ ಆಂಟಿ ವೈರಸ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಶುಂಠಿ ಚಹಾವನ್ನು ಸೇವಿಸುವುದರಿಂದ ರೋಗಗಳಿಂದ ದೂರವಿರಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ವಿಟಮಿನ್ ಸಿ : ಕಿತ್ತಳೆ, ನಿಂಬೆ, ಕಿವಿ ಮುಂತಾದ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಾಗಿರುತ್ತದೆ. ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ನೆಗಡಿಯಿಂದ ನಮ್ಮನ್ನು ಕಾಪಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular