HomeHealthಹಾಲಿನೊಂದಿಗೆ 'ಖರ್ಜೂರ' ಸೇವಿಸಿ ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ಹಾಲಿನೊಂದಿಗೆ ‘ಖರ್ಜೂರ’ ಸೇವಿಸಿ ಇಷ್ಟೆಲ್ಲಾ ಪ್ರಯೋಜನ ಪಡೆಯಿರಿ

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿನೊಂದಿಗೆ ಎರಡು ಖರ್ಜೂರವನ್ನೂ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

ಖರ್ಜೂರ ರಕ್ತದಲ್ಲಿರುವ ಕೆಟ್ಟ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಸುಸ್ತಾದ ನಿಮ್ಮ ದೇಹಕ್ಕೆ ಚೈತನ್ಯವನ್ನು ಒದಗಿಸುತ್ತದೆ. ಖರ್ಜೂರದಲ್ಲಿ ಉತ್ತಮ ಪ್ರಮಾಣದ ನಾರು ಇದ್ದು, ಇದು ಕರುಳಿನಲ್ಲಿ ಜೀರ್ಣಗೊಂಡ ಆಹಾರ ಸುಲಭದಲ್ಲಿ ಚಲಿಸುವಂತೆ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಮಾತ್ರವಲ್ಲ ವಿಸರ್ಜನೆ ಕಾರ್ಯವೂ ಸಲೀಸಾಗಿ ನಡೆಯುತ್ತದೆ.

ಇದರಿಂದ ಮೂಳೆಗಳು ದೃಢವಾಗುತ್ತವೆ. ಇದರಲ್ಲಿ ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗಳಿದ್ದು ಹಲವು ಬಗೆಯ ಕ್ಯಾನ್ಸರ್ ಗಳಿಂದ ಮುಕ್ತಿ ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಹಾಲುಣಿಸುವ ತಾಯಂದಿರಲ್ಲಿ ಹಾಲು ಹೆಚ್ಚಿಸುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೃದಯ ಸಂಬಂಧಿ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ರಕ್ತಹೀನತೆ ಸಮಸ್ಯೆಯನ್ನು ದೂರಮಾಡಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಮಧುಮೇಹವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ನೆರವಾಗುವ ಇದು ಪ್ರೊಟೀನ್ ಗಳ ಮೂಲಕ ಸ್ನಾಯುಗಳನ್ನು ಬಲಪಡಿಸುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular