ಸೋನಿಪತ್: ಹರಿಯಾಣದ ಸೋನಿಪತ್ ಹಾಗೂ ದೆಹಲಿಯ ಎನ್ ಸಿಆರ್ ನಲ್ಲಿ ಪ್ರಭಲ ಭೂಕಂಪ ಸಂಭವಿಸಿದೆ. ಸೋನಿಪತ್, ಎನ್ ಸಿಆರ್ ಗಳಲ್ಲಿ ಭೂಮಿ ಅಲುಗಾಡಿದ ಅನುಭವವಾಗಿದೆ.
ಇಂದು ಬೆಳಿಗ್ಗೆ 8:44ರ ಸುಮಾರಿಗೆ ಸೋನಿಪತ್ ನಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4ರಷ್ಟು ದಾಖಲಾಗಿದೆ. ಭೂಕಂಪದ ತೀವ್ರತೆಗೆ ಮನೆಗಳ ಕಿಡಕಿ, ಬಾಗಿಲು, ಮನೆಯಲ್ಲಿದ್ದ ವಸ್ತುಗಳು ಅಲುಗಾಡಿದ್ದು, ಜನರು ಕೆಲ ಕಾಲ ಆತಂಕಗೊಂಡಿದ್ದಾರೆ.
ಭೂಕಂಪದ ಕೇಂದ್ರಬಿಂದು ಭೂಮಿಯ 5 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ. ಭೂಕಂಪದಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

