HomeLatest News'ಸರಳ ವಿವಾಹ'ಕ್ಕೆ ಪ್ರತಿ ಜೋಡಿಗೆ ಸಿಗಲಿದೆ 50,000 ರೂ. ಸಹಾಯಧನ : ಯಾರು ಅರ್ಜಿ ಸಲ್ಲಿಸಬಹುದು.?

‘ಸರಳ ವಿವಾಹ’ಕ್ಕೆ ಪ್ರತಿ ಜೋಡಿಗೆ ಸಿಗಲಿದೆ 50,000 ರೂ. ಸಹಾಯಧನ : ಯಾರು ಅರ್ಜಿ ಸಲ್ಲಿಸಬಹುದು.?

ಬೆಂಗಳೂರು : ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಉತ್ತೇಜನ ನೀಡುವುದರ ಜೊತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ ರೂ. 50 ಸಾವಿರ ನೀಡಲಾಗುವುದಿ ಎಂದು ಪ್ರಕಟಣೆ ಹೊರಡಿಸಿದೆ.

ಸೌಲಭ್ಯದ ಪ್ರಯೋಜನ ಪಡೆಯಲು ಷರತ್ತುಗಳು:

  • ಅರ್ಜಿ ಸಲ್ಲಿಸುವ ವಧು ವರರು ಕರ್ನಾಟಕ ರಾಜ್ಯಕ್ಕೆ ಸೇರಿದ ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು
  • ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಿರತಕ್ಕದ್ದು
  • ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಠ 18, ಗರಿಷ್ಠ 42 ವರ್ಷ ಹಾಗೂ ವರನಿಗೆ ಕನಿಷ್ಠ 21, ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು
  • ವಧು-ವರರ ವಾರ್ಷಿಕ ಆದಾಯ ರೂ.2.50ಲಕ್ಷ ಮತ್ತು ಇಬ್ಬರ ಒಟ್ಟು ಆದಾಯ 5 ಲಕ್ಷ ಮೀರುವಂತಿಲ್ಲ
  • ವರನಿಗೆ ಈಗಾಗಲೇ ಜೀವಂತ ಪತ್ನಿಯಿದ್ದಲ್ಲಿ ಹಾಗೂ ವಧುವಿಗೆ ಜೀವಂತ ಪತಿಯಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ

ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಥವಾ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular