ಬೆಂಗಳೂರು: ಬೆಂಗಳೂರಿನಿಂದ ದುಬೈಗೆ ತೆರಳಿದ್ದ ಎಮಿರೇಟ್ಸ್ ವಿಮಾನ ಲ್ಯಾಂಡಿಂಗ್ ಸಿಗದ ಕಾರಣ ಮತ್ತೆ ಬೆಂಗಳೂರಿಗೆ ವಾಪಸ್ ಆಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 4:30ಕ್ಕೆ ವಿಮಾನ ಟೇಕಾಫ್ ಆಗಿತ್ತು. ದುಬೈಗೆ ತೆರಳಿದಾಗ ಅಲ್ಲಿ ಲ್ಯಾಂಡಿಂಗ್ ಅನುಮತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ವಿಮಾನ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದೆ. ಇದರಿಂದಾಗಿ ಜಿದ್ದಾಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ.
ವಾಅಪಸ್ ಬಂದ ಪ್ರಯಾಣಿಕರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಹೋಟೆಲ್ ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದುಬೈ ವಿಮನ ನಿಲ್ದಾಣದ ಬಳಿ ಇಂಧನ ಟ್ಯಾಂಕ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ದುಬೈ ಏರ್ ಪೋರ್ಟ್ ಬಂದ್ ಆಗಿದ್ದು, ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.

