HomeBusinessಇಂಜಿನಿಯರ್‌ಗಳಿಗೂ ಶಾಕ್ ನೀಡಿದ ಡ್ರೈ ಕ್ಲೀನರ್ ಆದಾಯ: ಒಂದು ಪುಟ್ಟ ಅಂಗಡಿಯ ತಿಂಗಳ ಸಂಪಾದನೆ ಎಷ್ಟು...

ಇಂಜಿನಿಯರ್‌ಗಳಿಗೂ ಶಾಕ್ ನೀಡಿದ ಡ್ರೈ ಕ್ಲೀನರ್ ಆದಾಯ: ಒಂದು ಪುಟ್ಟ ಅಂಗಡಿಯ ತಿಂಗಳ ಸಂಪಾದನೆ ಎಷ್ಟು ಗೊತ್ತೇ?

ಭಾರತದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಹತ್ತು ವರ್ಷಗಳ ಅನುಭವ ಪಡೆದವರು ಗಳಿಸುವ ವೇತನವನ್ನು ಗಲ್ಲಿಯ ಒಂದು ಪುಟ್ಟ ಡ್ರೈ ಕ್ಲೀನಿಂಗ್ ಅಂಗಡಿಯವರು ಸಂಪಾದಿಸುತ್ತಿದ್ದಾರೆ ಎಂಬ ಸುದ್ದಿ ಈಗ ಇಂಟರ್ನೆಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಷಯ ಹಂಚಿಕೊಂಡ ಕಂಟೆಂಟ್ ಕ್ರಿಯೇಟರ್ ನಳಿನಿ ಉನಾಗರ್ ಅವರ ಪೋಸ್ಟ್, ಸಣ್ಣ ಉದ್ಯಮಗಳ ಆದಾಯದ ಬಗ್ಗೆ ಹೊಸ ಆಯಾಮವನ್ನು ತೆರೆದಿಟ್ಟಿದೆ.

ತಮ್ಮ ಮನೆಯ ಹತ್ತಿರದ ಡ್ರೈ ಕ್ಲೀನಿಂಗ್ ಅಂಗಡಿ ಮಾಲೀಕರೊಂದಿಗೆ ನಡೆಸಿದ ಮಾತುಕತೆಯನ್ನು ನಳಿನಿ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಅಂಗಡಿಯನ್ನು ದಂಪತಿಗಳೇ ನಡೆಸುತ್ತಿದ್ದು, ನೆರವಿಗಾಗಿ ಇಬ್ಬರು ಸಂಬಳದ ಸಹಾಯಕರನ್ನು ಇಟ್ಟುಕೊಂಡಿದ್ದಾರೆ. ಇವರ ಮಾಸಿಕ ನಿವ್ವಳ ಲಾಭ ಬರೋಬ್ಬರಿ 2.37 ಲಕ್ಷ ರೂಪಾಯಿಗಳು ಎಂಬ ಮಾಹಿತಿ ಹೊರಬಿದ್ದಿದೆ.

ಲೆಕ್ಕಾಚಾರ ಹೀಗಿದೆ: ಈ ಅಂಗಡಿಯಲ್ಲಿ ದಿನಕ್ಕೆ ಸುಮಾರು 350 ಬಟ್ಟೆಗಳನ್ನು ಇಸ್ತ್ರಿ ಮಾಡಲಾಗುತ್ತಿದ್ದು, ಒಂದು ಬಟ್ಟೆಗೆ 10 ರೂಪಾಯಿಯಂತೆ ದಿನಕ್ಕೆ 3,500 ರೂಪಾಯಿ ಆದಾಯ ಬರುತ್ತದೆ. ಇದರ ಜೊತೆಗೆ ಸೂಟ್, ಸೀರೆ ಮತ್ತು ಲhengaದಂತಹ ಸುಮಾರು 20 ಪ್ರೀಮಿಯಂ ಬಟ್ಟೆಗಳನ್ನು ತಲಾ 350 ರೂಪಾಯಿಯಂತೆ ಡ್ರೈ ಕ್ಲೀನ್ ಮಾಡಲಾಗುತ್ತಿದ್ದು, ಅಲ್ಲಿಂದ ದಿನಕ್ಕೆ 7,000 ರೂಪಾಯಿ ಹರಿದು ಬರುತ್ತಿದೆ. ಹೀಗೆ ದಿನವೊಂದಕ್ಕೆ ಒಟ್ಟು 10,500 ರೂಪಾಯಿ ಗಳಿಕೆಯಾಗುತ್ತಿದೆ. ತಿಂಗಳಲ್ಲಿ ಕೇವಲ ಮೂರು ದಿನ ರಜೆ ಕಳೆದು ನೋಡಿದರೆ, ಒಟ್ಟು ಆದಾಯ ಸುಮಾರು 2,83,500 ರೂಪಾಯಿಗಳಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖರ್ಚು ವೆಚ್ಚಗಳ ಬಗ್ಗೆ ಗಮನಿಸಿದರೆ, ಸ್ವಂತ ಮಳಿಗೆಯಾದ್ದರಿಂದ ಬಾಡಿಗೆಯ ಹೊರೆ ಇವರಿಗಿಲ್ಲ. ತಿಂಗಳ ವಿದ್ಯುತ್ ಬಿಲ್ 6,000 ರೂಪಾಯಿ ಮತ್ತು ಇಬ್ಬರು ಸಹಾಯಕರಿಗೆ ತಲಾ 20 ಸಾವಿರದಂತೆ 40,000 ರೂಪಾಯಿ ಸಂಬಳ ನೀಡಿದರೂ, ದಂಪತಿಗಳ ಕೈಗೆ ತಿಂಗಳಿಗೆ ಸುಮಾರು 2.37 ಲಕ್ಷ ರೂಪಾಯಿ ಲಾಭ ಸಿಗುತ್ತಿದೆ.

ನೆಟ್ಟಿಗರ ಆಕ್ರೋಶ ಮತ್ತು ತಮಾಷೆ: ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಐಟಿ ಉದ್ಯೋಗಿಗಳು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. “ನಾವು ರಾತ್ರಿ 2 ಗಂಟೆಯವರೆಗೆ ಕೋಡಿಂಗ್ ಮಾಡುವುದಕ್ಕಿಂತ ಇಸ್ತ್ರಿ ಮಾಡುವುದನ್ನೇ ಕಲಿಯಬೇಕಿತ್ತು” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಇನ್ನು ಕೆಲವರು ಗಂಭೀರ ಆತಂಕ ವ್ಯಕ್ತಪಡಿಸಿದ್ದು, “ಈ ರೀತಿ ಆದಾಯ ಬಹಿರಂಗಪಡಿಸುವುದರಿಂದ ಅವರ ಮೇಲೆ ಐಟಿ (ಆದಾಯ ತೆರಿಗೆ ಇಲಾಖೆ) ದಾಳಿಯಾಗುವ ಸಾಧ್ಯತೆ ಇದೆ. ನೀವು ಅವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದೀರಿ” ಎಂದು ಕಂಟೆಂಟ್ ಕ್ರಿಯೇಟರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತೆರಿಗೆ ಪಾವತಿಸದ ಅಸಂಘಟಿತ ವಲಯದ ಇಂತಹ ವ್ಯವಹಾರಗಳಿಂದ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಮಧ್ಯಮ ವರ್ಗದವರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ ಎಂಬ ಚರ್ಚೆಯೂ ಶುರುವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular