HomeKarnatakaSHOCKING NEWS: ಜೊಮ್ಯಾಟೋ, ಸ್ವಿಗ್ಗಿ ಸಮವಸ್ತ್ರದಲ್ಲಿ ಮಾದಕ ವಸ್ತುಗಳ ಸಪ್ಲೈ; ಡ್ರಗ್ಸ್ ಸಿಂಡಿಕೇಟ್ ನಡೆಸುತ್ತಿದ್ದ ಆರೋಪಿ...

SHOCKING NEWS: ಜೊಮ್ಯಾಟೋ, ಸ್ವಿಗ್ಗಿ ಸಮವಸ್ತ್ರದಲ್ಲಿ ಮಾದಕ ವಸ್ತುಗಳ ಸಪ್ಲೈ; ಡ್ರಗ್ಸ್ ಸಿಂಡಿಕೇಟ್ ನಡೆಸುತ್ತಿದ್ದ ಆರೋಪಿ ಅರೆಸ್ಟ್

ಬೆಂಗಳೂರು: ಬಿಹಾರದಲ್ಲಿ ಕುಳಿತು ಬೆಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತ ಸಿಂಡಿಕೇಟ್ ನಡೆಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಖಿಲೇಶ್ ಕುಮಾರ್ ಸಿಂಗ್ ಬಂಧಿತ ಆರೋಪಿ. ಆರೋಪಿಯನ್ನು ವಿಶೇಷ ಕಾಯ್ದೆಯಡಿ ಬಂಧಿಸಲಾಗಿದೆ. 2018ರಿಂದಲು ವ್ಯವಸ್ಥಿತವಾಗಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪಿ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಟ್ ಎನ್ ಡಿ ಪಿಎಸ್ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಡ್ರಗ್ಸ್ ದಂಧೆಗಾಗಿ 8 ಜನ ಬಿಹಾರ ಮೂಲದ ಹುಡುಗರನ್ನು ಆರೋಪಿ ನೇಮಿಸಿಕೊಂಡಿದ್ದ. ಅಲ್ಲದೇ ಅವರಿಗೆ ತಿಂಗಳಿಗೆ 30 ಸಾವಿರ ರೂಪಾಯಿ ಸಂಬಳ ನೀಡುತ್ತಿದ್ದ. ಬಿಹಾರದಿಂದ ಗಾಂಜಾ, ಎಂಡಿಎಂ ಗಳನ್ನು ಕಳುಹಿಸುತ್ತಿದ್ದ. ಹೀಗೆ ಬಂದ ಡ್ರಗ್ಸ್ ಗಳನ್ನು 8 ಜನರು ಜೊಮ್ಯಾಟೋ, ಸ್ವಿಗ್ಗಿ, ಡನ್ಜೋ ಸಮವಸ್ತ್ರ ಹಾಕಿಕೊಂಡು ಡ್ರಗ್ಸ್ ಸಪ್ಲೈ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular