HomeKarnatakaನಿಯಂತ್ರಣ ತಪ್ಪಿದ ಲಾರಿಯಿಂದ ಹಾರಿದ ಚಾಲಕ ಚಕ್ರಕ್ಕೆ ಸಿಲುಕಿ ಸಾವು

ನಿಯಂತ್ರಣ ತಪ್ಪಿದ ಲಾರಿಯಿಂದ ಹಾರಿದ ಚಾಲಕ ಚಕ್ರಕ್ಕೆ ಸಿಲುಕಿ ಸಾವು

ಮಡಿಕೇರಿ: ಚಾಲನೆಯ ವೇಳೆಯಲ್ಲಿ ನಿಯಂತ್ರಣ ತಪ್ಪಿದ ಲಾರಿಯಿಂದ ಹಾರಿದ ಚಾಲಕ ಚಕ್ರದಡಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ ಶನಿವಾರ ಸಂತೆ ಸಮೀಪದ ಗುಡುಗಳಲೆ ಗ್ರಾಮದ ಬಳಿ ನಡೆದಿದೆ.

ಸುಂಕಣ್ಣ ಮೃತಪಟ್ಟ ಚಾಲಕ ಎಂದು ಹೇಳಲಾಗಿದೆ. ಲಾರಿಯಲ್ಲಿದ್ದ ನರೇಶ್ ಎಂಬುವರು ಅಪಾಯದಿಂದ ಪಾರಾಗಿದ್ದಾರೆ. ಆಂಧ್ರಪ್ರದೇಶದಿಂದ ಸೋಮವಾರಪೇಟೆಗೆ ಸಿಮೆಂಟ್ ತುಂಬಿಸಿಕೊಂಡು ತೆರಳುತ್ತಿದ್ದ ಲಾರಿ ಗುಡುಗಳಲೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿದೆ. ಲಾರಿ ಪಲ್ಟಿಯಾಗುವ ಅಪಾಯದ ಮುನ್ಸೂಚನೆ ಅರಿತ ಇಬ್ಬರೂ ಕೂಡ ಲಾರಿಯಿಂದ ಹಾರಿದ್ದಾರೆ. ಆದರೆ, ನಿಯಂತ್ರಣ ತಪ್ಪಿ ಚಾಲಕ ಸುಂಕಣ್ಣ ಹಿಂಬದಿಯ ಚಕ್ರಕ್ಕೆ ಸಿಲುಕಿದ್ದು, ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶನಿವಾರ ಸಂತೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular