HomeLatest Newsಆರೋಗ್ಯದ ಗಣಿ ಡ್ರ್ಯಾಗನ್ ಹಣ್ಣು ಡೆಂಗ್ಯೂ, ಶುಗರ್ ಹಾಗೂ ಹಾರ್ಟ್ ಪ್ರಾಬ್ಲಮ್ಸ್ ಇರೋರಿಗೆ ಇದು ಸಿದ್ದೌಷಧಿ

ಆರೋಗ್ಯದ ಗಣಿ ಡ್ರ್ಯಾಗನ್ ಹಣ್ಣು ಡೆಂಗ್ಯೂ, ಶುಗರ್ ಹಾಗೂ ಹಾರ್ಟ್ ಪ್ರಾಬ್ಲಮ್ಸ್ ಇರೋರಿಗೆ ಇದು ಸಿದ್ದೌಷಧಿ

ಬೆಂಗಳೂರು: ಆಡುಭಾಷೆಯಲ್ಲಿ ಪಾಪಸ್‌ಕಳ್ಳಿ ಹಣ್ಣು ಎಂದು ಕರೆಯಲ್ಪಡುವ, ನೋಡಲು ಕೆಂಪು ಬಣ್ಣದ ವಿಭಿನ್ನ ಆಕೃತಿ ಹೊಂದಿರುವ ಡ್ರ್ಯಾಗನ್ ಹಣ್ಣು (Dragon Fruit) ಸದ್ಯದ ಮಾರ್ಕೆಟ್‌ನಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ. ಕೇವಲ ನೋಡಲು ಮಾತ್ರ ಆಕರ್ಷಕವಲ್ಲದೇ, ಈ ಹಣ್ಣು ನೂರಾರು ಕಾಯಿಲೆಗಳಿಗೆ ರಾಮಬಾಣವಾಗಿರುವ ಆರೋಗ್ಯದ ಗಣಿ ಎಂದರೆ ತಪ್ಪಾಗಲಾರದು.

ಮೂಲತಃ ಮಧ್ಯ ಅಮೆರಿಕದ ಜಾತಿಗೆ ಸೇರಿರುವ ಈ ಹಣ್ಣನ್ನು ಈಗ ಭಾರತದಲ್ಲಿ, ವಿಶೇಷವಾಗಿ ನಮ್ಮ ಕರ್ನಾಟಕದ ಕೊಪ್ಪಳ ಮತ್ತು ಬಳ್ಳಾರಿ ಭಾಗದಲ್ಲಿ ವಾಣಿಜ್ಯ ಬೆಳೆಯಾಗಿ ಭರ್ಜರಿಯಾಗಿ ಬೆಳೆಯಲಾಗುತ್ತಿದೆ. ಕಿವಿ ಹಣ್ಣಿನ ತರಹವೇ ಸಣ್ಣ ಸಣ್ಣ ಬೀಜ ಹಾಗೂ ಅದ್ಭುತ ರುಚಿ ಹೊಂದಿರುವ ಈ ಡ್ರ್ಯಾಗನ್ ಹಣ್ಣಿನ ಅಸಲಿ ಆರೋಗ್ಯ ರಹಸ್ಯಗಳ ಮಾಹಿತಿ ಇಲ್ಲಿದೆ

ಹಣ್ಣೊಂದರಲ್ಲಿದೆ ಇಷ್ಟೆಲ್ಲಾ ಪೌಷ್ಟಿಕಾಂಶಗಳ ಭಂಡಾರ

ಡ್ರ್ಯಾಗನ್ ಹಣ್ಣಿನಲ್ಲಿ ಸಕ್ಕರೆ ಮತ್ತು ಕೊಬ್ಬಿನ (Fat) ಅಂಶ ಅತ್ಯಂತ ಕಡಿಮೆ ಇರುತ್ತದೆ. ಆದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಾಂಶ (Fiber), ಜೀವಸತ್ವ-ಸಿ (Vitamin C), ಜೀವಸತ್ವ-ಎ, ಕಬ್ಬಿಣಾಂಶ (Iron), ಕ್ಯಾಲ್ಸಿಯಂ, ರಂಜಕ, ಓಮೇಗಾ-3 ಮತ್ತು ಓಮೇಗಾ-6 ಕೊಬ್ಬಿನಾಮ್ಲಗಳು ಅಡಗಿದ್ದು, ದೇಹಕ್ಕೆ ಭರ್ಜರಿ ಶಕ್ತಿ ನೀಡುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ಸಿಗುವ ಟಾಪ್- ಪ್ರಯೋಜನಗಳು:

ಡೆಂಗ್ಯೂ ಜ್ವರಕ್ಕೆ ಸಿದ್ದೌಷಧಿ : ಇದು ದೇಹದಲ್ಲಿ ಬಿಳಿ ರಕ್ತ ಕಣಗಳ (White Blood Cells) ಸಂಖ್ಯೆಯನ್ನು ತಕ್ಷಣವೇ ಹೆಚ್ಚಿಸಲು ನೆರವಾಗುತ್ತದೆ. ಹಾಗಾಗಿಯೇ ಡೆಂಗ್ಯೂ ಜ್ವರ ಬಂದಾಗ ವೈದ್ಯರು ಈ ಹಣ್ಣನ್ನು ತಿನ್ನಲು ಹೆಚ್ಚು ಶಿಫಾರಸು ಮಾಡುತ್ತಾರೆ.

ಹೃದಯದ ಆರೋಗ್ಯಕ್ಕೆ ಬೆಸ್ಟ್ (Heart Care): ಇದರಲ್ಲಿರುವ ಓಮೇಗಾ-3 ಕೊಬ್ಬಿನಾಂಶವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಿ, ಹೃದಯಕ್ಕೆ ಹರಿಯುವ ರಕ್ತವನ್ನು ಸಂಪೂರ್ಣ ಶುದ್ಧೀಕರಿಸುತ್ತದೆ.

ತೂಕ ನಿಯಂತ್ರಣ ಮತ್ತು ಜೀರ್ಣಕ್ರಿಯೆ (Weight Loss): ಅತಿ ಕಡಿಮೆ ಫ್ಯಾಟ್ ಮತ್ತು ಅತಿ ಹೆಚ್ಚು ನಾರಿನಾಂಶ ಇರುವುದರಿಂದ, ಇದು ಮಲಬದ್ಧತೆ (Constipation) ಸಮಸ್ಯೆಯನ್ನು ನಿವಾರಿಸಿ ಸುಲಭವಾಗಿ ತೂಕ ಇಳಿಸಲು ಸಹಾಯ ಮಾಡುತ್ತದೆ.

ಶುಗರ್ ಕಂಟ್ರೋಲ್ (Diabetes Control): ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸುವ ಗುಣ ಹೊಂದಿದ್ದು, ಮಧುಮೇಹಿಗಳಿಗೆ ಇದು ಅತ್ಯಂತ ಉತ್ತಮ ಹಣ್ಣಾಗಿದೆ.

ಕ್ಯಾನ್ಸರ್ ವಿರುದ್ಧ ಹೋರಾಟ (Anti-Cancer): ಅತ್ಯಧಿಕ ಉತ್ಕರ್ಷಣ ನಿರೋಧಕಗಳನ್ನು (Antioxidants) ಹೊಂದಿರುವ ಈ ಹಣ್ಣು ದೇಹದಲ್ಲಿ ಕ್ಯಾನ್ಸರ್ ಕಣಗಳು ಉತ್ಪತ್ತಿಯಾಗದಂತೆ ತಡೆಯುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಮೆದುಳು ಚುರುಕು ಮತ್ತು ರಕ್ತಹೀನತೆ ಮುಕ್ತಿ: ವಿಟಮಿನ್ ಸಿ ಮತ್ತು ಎ ಹೆಚ್ಚಿರುವುದರಿಂದ ಮೆದುಳು ಸದಾ ಚುರುಕಾಗಿರುತ್ತದೆ. ರಕ್ತದೊತ್ತಡ (BP) ನಿಯಂತ್ರಿಸುವುದರ ಜೊತೆಗೆ ರಕ್ತಹೀನತೆ (Anemia) ಮತ್ತು ಶ್ವಾಸಕೋಶದ ಸಮಸ್ಯೆಯನ್ನು ಇದು ದೂರ ಮಾಡುತ್ತದೆ.

ಗರ್ಭಿಣಿಯರಿಗೆ ವರ ಹಾಗೂ ಮೂಳೆ ಬಲ: ಗರ್ಭಿಣಿ ಮಹಿಳೆಯರಿಗೆ ಬೇಕಾದ ಗರಿಷ್ಠ ಪೌಷ್ಟಿಕಾಂಶವನ್ನು ಇದು ಒದಗಿಸುತ್ತದೆ. ಜೊತೆಗೆ ಇದರಲ್ಲಿರುವ ಕ್ಯಾಲ್ಸಿಯಂ ಹಲ್ಲು ಮತ್ತು ಮೂಳೆಗಳನ್ನು ವಜ್ರದಂತೆ ಬಲಿಷ್ಠಗೊಳಿಸುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular